ಮೇ 10 ನೇ ತಾರೀಖು ನಡೆದಿದ್ದಂತಹ, ತೀವ್ರ ಕುತೂಹಲ ಕೆರಳಿಸಿದ್ದಂತಹ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. 16 ನೇ ವಿಧಾನಸಭೆಯನ್ನು ಪ್ರವೇಶಿಸುವಂತಹ ಅದೃಷ್ಟ ಯಾವ ಪಕ್ಷಕ್ಕೆ ಎಂಬ ಲೆಕ್ಕಾಚಾರ ಜೋರಾಗಿದೆ.
224 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಳ ಭವಿಷ್ಯ ಇಂದು ನಿರ್ಧಾರ ವಾಗಲಿದೆ. 20615 ಅಭ್ಯರ್ಥಿ ಗಳ ಭವಿಷ್ಯ ಇಂದು ಹೊರ ಬೀಳಲಿದೆ. ಇಂದು 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ರಾಜ್ಯದ 34 ಮತ ಎಣಿಕೆ ಕೇಂದ್ರಗಳಲ್ಲಿ ಕೌಂಟಿಂಗ್ ನಡೆಯುತ್ತಿದೆ.

ಇನ್ನು ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇವತ್ತು ಕರ್ನಾಟಕ ವಿಧಾನಸಭೆ ಫಲಿತಾಂಶದ ದಿನ. ಬಹಳ ಪ್ರಮುಖ ದಿನ. ರಾಜ್ಯದ ಜನರ ದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಫಲಿತಾಂಶ ಬಹಳ ಪ್ರಮುಖವಾದದ್ದು. ಬಿಜೆಪಿಗೆ ಸಂಪೂರ್ಣ ಬಹುಮತ ಬರೋ ವಿಶ್ವಾಸವಿದೆ. ಕೆಲವೇ ಗಂಟೆಗಳಲ್ಲಿ ಟ್ರೆಂಡ್ ಗೊತ್ತಾಗಿಲಿದೆ. ನಾಲ್ಕೈದು ಗಂಟೆಗಳಲ್ಲಿ ಹೆಚ್ಚು ಕಡಿಮೆ ಫಲಿತಾಂಶ ಯಾವ ದಿಕ್ಕಿನಲ್ಲಿ ಇರುತ್ತೆ ಅನ್ನೋದು ಗೊತ್ತಾಗಲಿದೆ. ಪೈಪೋಟಿ ಇದ್ರೂ, ಜನರು ಅತ್ಯಂತ ಶಾಂತಿ ಸುವ್ಯವಸ್ಥೆಯಿಂದ ಮತದಾನ ಮಾಡಿದ್ದಾರೆ. ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ. ಸ್ಪಷ್ಟ ಬಹುಮತದಿಂದ ನಮ್ಮ ಸರ್ಕಾರ ಬರುವ ಭರವಸೆ ಇದೆ ಎಂದರು. ಆಪರೇಷನ್ ಕಮಲ ಎಂಬ ಸುದ್ದಿ ಸದ್ದು ಮಾಡ್ತಿದ್ಯಲ್ಲಾ.. ನೀವ್ ಏನು ಹೇಳ್ತೀರಿ ಅದರ ಬಗ್ಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್‌ನ ಯಾರೂ ನಮ್ಮ ಸಂಪರ್ಕದಲ್ಲಿ ಇಲ್ಲ. ನಾವೇ ಸರ್ಕಾರ ರಚನೆ ಮಾಡುವ ವಿಶ್ವಾಸ ವಿದೆ ಎಂದು ತಿಳಿಸಿದರು.




