Jagadish Shettar: ನನಗೆ ಗೆಲ್ಲಲು ಆಗ್ಲಿಲ್ಲ. ಆದರೂ ತೃಪ್ತಿ ಇದೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನನ್ನನ್ನು ಸೋಲಿಸಲು ಹೋಗಿದ್ದ ವ್ಯಕ್ತಿಗಳು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ನಾನು ಸೋತಿದ್ದೇನೆ ಅನ್ನೋ ದುಃಖ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ ಯಲ್ಲಿ ಗೋಷ್ಠಿ ನಡೆಸಿ ಮಾತನಾಡಿದ ಅವರು,
ಲಿಂಗಾಯತ ಸಮುದಾಯ ಕಡೆಗಣಿಸಿದ್ರು ಅನ್ನೋದರ ಪರಿಣಾಮ ಈಗ ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಕಾಣಿಸುತ್ತಿದೆ.‌ ಒಬ್ಬರಿಗೆ ಪೆಟ್ಟು ಕೊಡಲು ಹೋಗಿ ಇಡೀ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ. ಗುಜರಾತ್ ಪ್ರಯೋಗ ಇಲ್ಲಿ ಮಾಡಿದ್ರು, ಯಾಕೆ ಆಗಲಿಲ್ಲ.ಲಿಂಗಾಯತ ಕಡೆಗಣನೆ ಆಗಿರೋದು ಬಿಜೆಪಿ ಸೋಲಿಗೆ ಕಾರಣ.. ಇದರ ಜೊತೆಗೆ ಕರಪ್ಷನ್, ಕಾನೂನು ಸುವ್ಯವಸ್ಥೆ ವಿಫಲವಾಗಿದ್ದು ಬಿಜೆಪಿ ಸೋಲಿಗೆ ಕಾರಣ..ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲಾಯ್ತು..ಐಟಿ ರೇಡ್, ಭಯ,ಒತ್ತಡ ತಂತ್ರ ಹಾಕೋ ಕೆಲಸ ಮಾಡಿದ್ರು.‌ಹೀಗಾಗಿ ಸೋಲಾಗಿದೆ. ಆದರೂ ನನಗೆ ಸೋಲಿನ ಬೇಸರ ಇಲ್ಲ. ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ. 70 ವರ್ಷವಾದ ಮೇಲೆ ನಾನು ಚುನಾವಣಾ ರಾಜಕೀಯದಲ್ಲಿ ಇರಲ್ಲ. ನನಗೀಗ 67 ವರ್ಷ ಮುಂದೆ ಏನಾಗುತ್ತೆ ನೋಡೋಣ ಎಂದರು.

ಮುಂದುವರೆದು ಮಾತನಾಡಿದ ಅವರು, ಬಿಜೆಪಿ ದಕ್ಷಿಣ ಭಾರತದಲ್ಲಿ ಹೇಗೆ ಅವಸಾನ ಆಗುತ್ತಿದೆ ಅಂತಾ ಗೊತ್ತಾಗುತ್ತಿದೆ. ನಾನೇ ಬೆಳೆಸಿದ್ದ ಬಿಜೆಪಿ ಮೈಂಡ್‌ಸೆಟ್ ಛೇಂಜ್ ಮಾಡಲು ಆಗಿಲ್ಲ.‌ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ನಮ್ಮ ಒಳಹೊಡೆತ ಕೆಲಸ ಆಗಿಲ್ಲ, ಏನಾಯ್ತು ಅಂತಾ ಭೂತ್ ವೈಜ್ ಪರಿಶೀಲನೆ ಮಾಡುತ್ತೇನೆ.‌ ಕೆಲವೇ ವ್ಯಕ್ತಿಗಳ ಕುತಂತ್ರದಿಂದ ಇದೆಲ್ಲ ಆಗುತ್ತಿದೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ, ಇದರ ಪರಿಣಾಮ ದೇಶಾದ್ಯಂತ ಆಗುತ್ತೆ.‌ಲಿಂಗಾಯತ ಬೆಲ್ಟ್ ಮೇಲೆ ಇಂಪ್ಯಾಕ್ಟ್ ಆಗಿದ್ದು, ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದು ಗೆಲುವಿಗೆ ಒಂದು ಕಾರಣ.‌ ಹುಬ್ಬಳ್ಳಿಯಲ್ಲಿ ಬಿಜೆಪಿ ಒತ್ತಡ ತಂತ್ರ ಹೇರಿ, ಭಯದ ವಾತಾವರಣ ಹೇರಿದ್ದರು. ಹಣ ಹಂಚಿ ಚುನಾವಣೆಯಲ್ಲಿ ಗೆದ್ದಿದ್ದಾರೆ.‌ಅಧಿಕಾರದ ದುರುಪಯೋಗ, ದೌರ್ಜನ್ಯವಾಗಿದೆ.‌ಮೋದಿ ನಾಯಕತ್ವ, ಬಿಜೆಪಿ ಸರ್ಕಾರವಿದ್ದಾಗಲೂ 65ಕ್ಕೆ ಬಂದು ನಿಂತಿದ್ದಾರೆ ಎಂದು ಕುಟುಕಿದರು.

ನಾನೆಂದೂ ಸೇಡಿನ ರಾಜಕೀಯ ಮಾಡಿಲ್ಲ. ಬಿಜೆಪಿಯ ಅಹಂಕಾರ, ಹಣದ ಮದಕ್ಕೆ ಉತ್ತರ ಕೊಟ್ಟಿದ್ದೇನೆ. ನನಗೆ ಲಾಭವಾಗಿಲ್ಲ, ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಎಂದರು. ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

More News