JAYANAGAR ELECTION: ಜಯನಗರದಲ್ಲಿ ಮಿಡ್ ನೈಟ್ ಹೈಡ್ರಾಮಾ ಮೂರು ಬಾರಿ ಮತ ಎಣಿಕೆ ಬಳಿಕ ಬಿಜೆಪಿಗೆ ಜಯ..!

ಗೊಂದಲಮಯವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕೊನೆಗೂ ಹೊರ ಬಿದ್ದಿದ್ದು, ಪ್ರಾರಂಭದಲ್ಲಿ ಗೆಲುವನ್ನು ಸಾಧಿಸಿದ ಸೌಮ್ಯ ರೆಡ್ಡಿ ನಂತರ 16 ಮತಗಳಿಂದ ಹಿನ್ನಡೆ ಅನುಭವಿಸಿದರು. ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಸೋತು ಗೆಲುವನ್ನು ಪಡೆದಿದ್ದಾರೆ.

ಮತ ಎಣಿಕೆ ಕೇಂದ್ರದ ಬಳಿ ನಿನ್ನೆ ತಡರಾತ್ರಿ ಹೈ ಡ್ರಾಮ ನಡೆಯಿತು. ಮೊದಲ ಬಾರಿ ಎಣಿಕೆಗೊಂಡ ಮತಗಳಲ್ಲಿ ಹಾಲಿ ಶಾಸಕಿಯಾಗಿದ್ದ ಸೌಮ್ಯ ರೆಡ್ಡಿ ಮೇಲುಗೈ ಸಾಧಿಸಿದರು. ಇದರಿಂದ ಸಿಟ್ಟಾದ ಬಿಜೆಪಿ ಅಭ್ಯರ್ಥಿ ಪರ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಹೀಗಾಗಿ ಮತವನ್ನು ಮರು ಎಣಿಕೆ ಮಾಡಲಾಯಿತು. ಮರು ಎಣಿಕೆಗೊಂಡ ಮತಗಳಲ್ಲಿ ಬಿಜೆಪಿ 16 ಮತಗಳ ಅಂತರದಲ್ಲಿ ಗೆಲುವು ಸಾಧಿಸಿತು. ಇದರಿಂದ ಸಿಟ್ಟಾದ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿ ಪ್ರತಿಭಟನೆ ಕೈ ಗೊಂಡರು. ಸೌಮ್ಯ ರೆಡ್ಡಿ ವಿಷಯ ತಿಳಿಯುತ್ತಿದ್ದಂತೆ ಡಿಕೆ ಬ್ರದರ್ಸ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಇನ್ನು ಡಿಕೆ ಶಿವಕುಮಾರ್, ಡಿಕೆ ಸುರೇಶ್ ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿ ರಾಮಮೂರ್ತಿ, ಆರ್ ಅಶೋಕ್ ಸ್ಥಳದಿಂದ ಕಾಲ್ಕಿತ್ತ ಘಟನೆಗಳೂ ನಡೆಯಿತು.

ಇನ್ನು ಇತ್ತ ಕಾಂಗ್ರೆಸ್, ಬಿಜೆಪಿ ನಾಯಕರ ಗಲಾಟೆ ಹಿನ್ನಲೆಯಲ್ಲಿ ಮರು ಮತ ಎಣಿಕೆ ನಡೆಸಲಾಯಿತು.
ಮೂರು ಬಾರಿ ಮತ ಎಣಿಕೆ ನಡೆಸಿದ ಬಳಿಕ ಬಿಜೆಪಿ ಮೇಲುಗೈ ಸಾಧಿಸಿದೆ. ಸೌಮ್ಯ ರೆಡ್ಡಿ 16 ಮತಗಳಿಂದ ಹಿನ್ನಡೆ ಅನುಭವಿಸಿದರು. ಸೋಲನ್ನು ಕಾಣುತ್ತಿದ್ದಂತೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಸ್ಥಳದಲ್ಲೇ ಗಳಗಳ ಕಣ್ಣೀರು ಹಾಕಿದರು.

More News