ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಪೋಷಕ ನಟ ಸತ್ಯಜಿತ್ ನಿನ್ನೆರಾತ್ರಿ ನಿಧನ ಹೊಂದಿದ್ದಾರೆ. 72 ವರ್ಷ ವಯಸ್ಸಿನ ಸತ್ಯಜಿತ್ ಕಳೆದ ಹಲವಾರು ದಿನಗಳಿಂದ ಅನಾರೋಗದ ಸಮಸ್ಯೆಯಿಂದ ಬಳಲುತ್ತಿದ್ದರು.
ಸಯ್ಯದ್ ನಿಜಾಮುದ್ದೀನ್ ಮೂಲ ಹೆಸರಿನ ಸತ್ಯಜಿತ್ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಬಹು ಬೇಡಿಕೆಯ ಪೋಷಕ ನಟರಾಗಿರುವ ಇವರು, ವಿಲನ್ ಮತ್ತು ಹಾಸ್ಯ ಪ್ರಧಾನ ಚಿತ್ರಗಳಲ್ಲಿಯೂ ನಟಿಸಿದ್ದರು.
ಅಪ್ಪು, ಚ್ರೈತ್ರದ ಪ್ರೇಮಾಂಜಲಿ,ಆಪ್ತಮಿತ್ರ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿ ಪ್ರೇಕ್ಷಕರ ಅಚ್ಚು ಮೆಚ್ಚಿನ ನಟರಾಗಿದ್ದರು. ಕಳೆದ ಹಲವಾರು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಗ್ಯಾಂಗ್ರಿನ್ ಕಾರಣದಿಂದ ಒಂದು ಕಾಲನ್ನು ಕಳೆದುಕೊಂಡಿದ್ದರು.




