Congress CM Competition: ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಸಿಎಂ ಪೈಪೋಟಿ: ಡಿಕೆ, ಸಿದ್ದು ಮನೆಗೆ ದೌಡಾಯಿಸಿದ ಅಭಿಮಾನಿಗಳು

ಬೆಂಗಳೂರು: ಫಲಿತಾಂಶ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕರುನಾಡಲ್ಲಿ ಕಾಂಗ್ರೆಸ್ ಜಯಭೇರಿ ಬೆನ್ನಲ್ಲೇ ಸಿಎಂ ಯಾರು ಎಂಬ ಕಸರತ್ತು ಜೋರಾಗಿ ನಡೆಯುತ್ತಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಎಂದು ಹೇಳಿಕೆ ಕೊಟ್ಟರೆ ಮತ್ತೊಂದೆಡೆ ಮುಂದಿನ ಸಿಎಂ ನಾನೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಬಲವಾಗಿ ಪೈಪೋಟಿ ಕೊಡುತ್ತಿದ್ದು, ಸಿಎಂ ಯಾರೆಂಬ ಚರ್ಚೆ ಗರಿಗೆದರಿದೆ.

ಇನ್ನು ಇಂದು ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಫ್ಲೆಕ್ಸ್ ಹಾಕಿಸಿ ಪಟಾಕಿ ಸಿಡಿಸಿ ಘೋಷಣೆ ಕೂಗಿದರು. ಎರಡನೇ ಬಾರಿ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ
ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು
ಸಿದ್ದರಾಮಯ್ಯ ಆಪ್ತನಿಂದ ಫ್ಲೇಕ್ಸ್ ಅಳವಡಿಕೆ ಮಾಡಿದ್ದು, ಅಭಿಮಾನಿಗಳು ಜಮಾಯಿಸಿದ್ದರು. ಇತ್ತ ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದಲ್ಲೂ ಫ್ಲೆಕ್ಸ್ ಹಾಕಿಸಿ ಮುಂದಿನ ಸಿಎಂ ಕೆಪಿಸಿಸಿ ಅಧ್ಯಕ್ಷರೇ ಎಂದು ಬರೆಯಲಾಗಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಲಾಯ್ತು. ಒಟ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮುಂದಿನ ಮುಖ್ಯಮಂತ್ರಿ ನೀವೇನಾ ಎಂಬ ಪ್ರಶ್ನೆಗೆ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಾಂಗ ಪಕ್ಷದ ಸಭೆ ಇದೆ. ಕುತೂಹಲ ಏನೂ ಬೇಡ. ಜನ ನಮ್ಮ ಪರವಾಗಿ ತೀರ್ಪು ಕೊಟ್ಟಿದ್ದಾರೆ. ನಾನು ಏನು ವಿಶ್ವಾಸದಲ್ಲಿ ಎಷ್ಟು ಸ್ಥಾನ ಗೆಲ್ತೀವಿ ಅಂತಾ ಹೇಳಿದ್ದೆನೋ ಅಷ್ಟೇ ಸ್ಥಾನ ಗೆದ್ದಿದ್ದೇವೆ. ಜನರ ಮೇಲೆ ನನಗೆ ಅಷ್ಟು ವಿಶ್ವಾಸ ಇತ್ತು. ಮುಂದೆ ನೋಡೋಣ ಎಂದು ನೊಣವಿನಕೆರೆ ಅಜ್ಜಯ್ಯ ದರ್ಶನಕ್ಕೆ ತೆರಳಿದರು.

ಇನ್ನು ಮುಂದಿನ ಸಿಎಂ ಯಾರಾಗ್ತಾರೆ.?
ಎಂಬ ಗದ್ದಲ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೆನೆಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಿದ್ದು, ಡಿಕೆ ಯವರ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಗಳ ಮನೆ ಬಳಿ ಭದ್ರತೆ ಮಾಡಿದಂತೆ ಸುತ್ತಲೂ ಬ್ಯಾರಿಕೇಡ್ ಹಾಕಿ ಭದ್ರತೆ ಒದಗಿಸಲಾಗಿದ್ದು, ಸಂಜೆ ನಡೆಯುವ ಸಿಎಲ್ ಪಿ ಮೀಟಿಂಗ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರ ಹೊರ ಬೀಳುವ ಸಾಧ್ಯತೆ ಇದೆ

More News