Karnataka CM: ಅಜ್ಜಯ್ಯನ ಮಾತಿಗೆ ದಂಗುಬಡಿದು ಸಿಎಂ ಪಟ್ಟು ಹಿಡಿದ್ರಾ ಡಿಕೆ ಶಿವಕುಮಾರ್..?

ಬೆಂಗಳೂರು: ಸಿಎಂ ಹುದ್ದೆ ಈಗ್ಲೇ ಬೇಕು.. ಬೇಕೆ ಬೇಕು ಎಂದು ಡಿಕೆ ಶಿವಕುಮಾರ್ ಪಟ್ಟು ಹಿಡಿಯಲು ಕಾರಣ ಅಜ್ಜಯ್ಯ ಕೊಟ್ಟ ಎಚ್ಚರಿಕೆಯಿಂದಂತೆ.

ಡಿಕೆ ಶಿವಕುಮಾರ್ ಎಲ್ಲರಂತೆ ತುಸು ಹೆಚ್ಚೇ ದೈವ ಭಕ್ತರು‌.. ಚುನಾವಣಾ ಮುನ್ನ, ನಂತರ ದೇವಸ್ಥಾನ ಕ್ಕೆ ತೆರಳಿ ವಿಶೇಷ ಪೂಜೆ ನಡೆಸುತ್ತಲೇ ಇದ್ದಾರೆ. ಹೀಗೆ ಅಜ್ಜಯ್ಯ ನ ಬಳಿ ಆಶಿರ್ವಾದಕ್ಕೆಂದು ತೆರಳಿದಾಗ ಸಿಕ್ಕ ಎಚ್ಚರಿಕೆಯಿಂದ ಡಿಕೆ ಶಿವಕುಮಾರ್ ಸಿಎಂ ಖುರ್ಚಿ ಪಟ್ಟು ಬಿಗಿ ಗೊಳಿಸಿದ್ದಾರೆ ಎನ್ನಲಾಗ್ತಿದೆ.

ಯಾರಾಗ್ತಾರೆ ಮುಂದಿನ ಸಿಎಂ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿ ಸದ್ದು ಮಾಡ್ತಿರುವ ಬೆನ್ನಲ್ಲೇ ನನಗೇ ಸಿಎಂ ಸ್ಥಾನ ಬೇಕು ಎಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಕಾರಣ ಅಜ್ಜಯ್ಯ ಎಚ್ಚರಿಕೆ. ಅಜ್ಜಯನ ಭೇಟಿಗೆ ತೆರಳಿದಾಗ ಈ ಬಾರಿ ಸಿಎಂ ಆದ್ರೆ ಆಗ್ತೀರಿ.. ಇಲ್ಲ ಅಂದ್ರೆ ಇಲ್ಲ.. ಎಂದಿದ್ದಾರಂತೆ. ಅಜ್ಜಯ್ಯ ಅವರ ಮಾತಿಗೆ ದಂಗು ಬಡಿದು ಹೋಗಿರುವ ಡಿಕೆಶಿ, ಈಗ್ಲೇ ನನಗೆ ಸಿಎಂ ಹುದ್ದೆ ಕೊಡಿ ಎಂದು ವರಿಷ್ಟರ ಬಳಿ ಪಟ್ಟು ಹಿಡಿದಿದ್ದಾರಂತೆ.

ಇನ್ನು ತಾವು ಮಾಡಿದ ಕೆಲಸದ ಬಗ್ಗೆ ಒತ್ತಿ ಒತ್ತಿ ಬೆಂಗಳೂರಿನಲ್ಲಿ ಗೋಷ್ಠಿ ನಡೆಸಿದ ಅವರು, ದೆಹಲಿಗೆ ತೆರಳಿ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

More News