Siddaramaiah Brother: ಈ ಸ್ಥಾನಕ್ಕೆ ಬರಲು ನಮ್ಮಣ್ಣ ಬಹಳ ಕಷ್ಟ ಪಟ್ಟಿದ್ದಾನೆ: ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ

ಯಾರು ಕರ್ನಾಟಕ ಮುಖ್ಯಮಂತ್ರಿ ಎಂಬ ವಿಚಾರಕ್ಕೆ ಬಹುತೇಕ ತೆರೆ ಬಿದ್ದಿದ್ದು, ಹೈಕಮಾಂಡ್ ನಿಂದ ಘೋಷಣೆ ಅಷ್ಟೇ ಬಾಕಿ ಇದೆ. ಸಿದ್ದರಾಮಯ್ಯ ಗೆ ಸಿಎಂ ಸ್ಥಾನ ಬಹುತೇಕ ಖಚಿತ ಎಂಬ ಬೆನ್ನಲ್ಲೇ ನಮ್ಮಣ್ಣ ಬಹಳ ಒಳ್ಳೆಯ ಆಡಳಿತ ಕೊಡ್ತಾರೆ ಎಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಹೇಳಿದ್ದಾರೆ.

ನಾಳೆ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಅವರು ಕಂಠೀರವ ಸ್ಟುಡಿಯೋ ದಲ್ಲಿ ಪ್ರಮಾಣವಚ ತೆಗೆದುಕೊಳ್ಳಲಿದ್ದಾರೆ. ಈ ಸಂತಸದ ವಿಚಾರದ ಕುರಿತು ಖಾಸಗಿ ಚಾನಲ್ ಗೆ ಮಾತನಾಡಿದ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ, ನಮ್ಮ ಅಣ್ಣ ಬಡವರ ಪರ. ಈ ಬಾರಿಯೂ ಒಳ್ಳೆ ಆಡಳಿತ ಕೊಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸ್ಥಾನಕ್ಕೆ ಬರಲು ನಮ್ಮಣ್ಣ ಬಹಳ ಕಷ್ಟ ಪಟ್ಟಿದ್ದಾನೆ. ನಾನು ಅನಕ್ಷರಸ್ಥ. ನಾನು ಏನೂ ಅಂತ ಅವನ ಬಳಿ ಹೋಗಿ ಕೇಳಲಿ…? ನಾವು ಸಹೋದರರು ಯಾವತ್ತೂ ಫೋನ್ ನಲ್ಲಿಯೂ ಮಾತಾಡಲ್ಲ. ನಾವು ಕುಟುಂಬದವರು ಯಾವತ್ತೂ ನಮ್ಮ ಅಣ್ಣನ ಆಡಳಿತದ ಹತ್ತಿರ ಹೋಗಲ್ಲ. ವಿಧಾನಸೌಧಕ್ಕೂ ಹೋಗೋ ಅಭ್ಯಾಸ ಇಲ್ಲ. ಏನಾದ್ರೂ ಇದ್ದರೆ ಮನೆಗೆ ಹೋಗಿ ಮಾತಾಡಿ ಬರ್ತಿವಿ ಎಂದು ಹೇಳಿದರು.

More News