Deputy CM DKS: ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಹಿನ್ನಡೆ..?

ನವದೆಹಲಿ: ಕಾಂಗ್ರೆಸ್ ಪಕ್ಷ ಸಂಕಷ್ಟ ಕ್ಕೆ ಸಿಲುಕಿದಾಗಲೆಲ್ಲ ಬಂದು ಟ್ರಬಲ್ ಶೂಟ್ ಮಾಡ್ತಿದ್ದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ರವರೇ‌ ಕೈ ನಾಯಕರಿಗೆ ಟ್ರಬಲ್ ಆಗಿ ಪರಿಣಮಿಸಿದ್ದರು. ಅದಕ್ಕೆ ಕಾರಣ ಸಿಎಂ ಪಟ್ಟ.. ನಾನೇ ಸಿಎಂ ಆಗ್ಬೇಕೆಂದು ಭಿಗಿ ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಗೆ ಭಾರೀ ನಿರಾಸೆ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕೆ.ಸಿ.ವೇಣುಗೋಪಾಲ್ ಅಧಿಕೃತವಾಗಿ ಘೋಷಣೆ ಮಾಡಿದರು. ಆದರೆ 5 ವರ್ಷ ದ ಅಧಿಕಾರ ಹಂಚಿಕೆ ಬಗ್ಗೆ ಏನನ್ನೂ ಮಾತನಾಡದೇ ಬರೀ ಸಿಎಂ,ಡಿಸಿಎಂ ಘೋಷಿಸಿದ್ದು, ಡಿಕೆ ಶಿವಕುಮಾರ್ ಗೆ ಭಾರೀ ನಿರಾಸೆಯಾಗಿದೆ.

ಇಂದು ಗೋಷ್ಠಿ ನಡೆಸಿ ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ನೀಡಿದ ಕೆಸಿ ವೇಣುಗೋಪಾಲ್, ಅಧಿಕಾರ ಹಂಚಿಕೆ ಪ್ರಶ್ನೆಗೆ ರಾಜ್ಯದ ಜನರ ಜೊತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡದ ಕಾರಣ ಡಿಕೆ ಕನಸಿಗೆ ಭಾರೀ ನಿರಾಸೆ
ಉಂಟಾಗಿದೆ. ಕಛೇರಿಯಲ್ಲಿ ನಡೆದ ಗೋಷ್ಠಿ ಯಲ್ಲಿ ಮುಂದುವರೆದು ಮಾತನಾಡಿದ ಅವರು, ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆ ವರೆಗೂ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ. ಸಿಎಂ, ಡಿಸಿಎಂ ಜತೆ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೆ ಪಟ್ಟು ಹಿಡಿಯಲು ಕಾರಣ ಸಿದ್ದರಾಮಯ್ಯ ನಡೆ ಎನ್ನಲಾಗಿತ್ತು. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಪೂರ್ಣಾವಧಿಯ ಸಿಎಂ ಆದರು. ಈ ವೇಳೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೈಸೂರು ಮಿನರಲ್ಸ್ ಗೆ ನಷ್ಟ ಮಾಡಿದ್ದಾರೆಂಬ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸಚಿವ ಸ್ಥಾನವನ್ನೂ ನೀಡಲು ನಿರಾಕರಿಸಿದ್ದರು. ಯಾವಾಗ ಸಂಪುಟಕ್ಕೆ ನನ್ನನ್ನು ಸೇರಿಸಿಕೊಳ್ತೀರಿ ಎಂದು ನೇರವಾಗಿ ಡಿಕೆ ಶಿವಕುಮಾರ್ ಕೇಳಿದ್ದಾಗಲೂ ಈಗ ಆಗಲ್ಲ.. ಮುಂದೆ ನೋಡೋಣ ಎಂಬ ಸಿದ್ದು ಹೇಳಿಕೆಯಿಂದ ಕುದ್ದಿದ್ದ ಡಿಕೆ ಶಿವಕುಮಾರ್.. ಆ ಅವಮಾನದ ಪೆಟ್ಟಿನಿಂದಾಗಿಯೇ ಸಿಎಂ ಪಟ್ಟ ಬೇಕೆಂದು ಕೈ ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದರು.

More News