ಬೆಂಗಳೂರು: ನಿಮ್ಮ ಬಳಿ 2000 ರೂಪಾಯಿ ನೋಟ್‌ಗಳಿದ್ದರೆ ಬ್ಯಾಂಕ್‌ಗೆ ಸೆಪ್ಟಂಬರ್ ಒಳಗೆ ವಾಪಸ್ ಕೊಟ್ಬಿಡಿ.. ಯಾಕೆಂದರೆ ಚಲಾವಣೆಯಲ್ಲಿರುವ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಪ್ರಕಟಿಸಿದೆ.
2000 ನೋಟು ಬದಲಾವಣೆ ಗೆ ಕೆಲ ನಿಮಯ ವಿಧಿಸಿ ಬದಲಾವಣೆ ಗೆ ಅವಕಾಶ ಮಾಡಿಕೊಡಲಾಗಿದೆ. ದಿನವೊಂದಕ್ಕೆ 10 ನೋಟುಗಳು ಮಾತ್ರ ಬದಲಾವಣೆ ಗೆ ಅವಕಾಶ ಇರಲಿದೆ. ಬ್ಯಾಂಕ್ ಖಾತೆ ಹೊಂದದಿಲ್ಲದವರೂ ಕೂಡ 2000 ಮುಖಬೆಲೆಯ ನೋಟನ್ನು ಬದಲಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಬ್ಯಾಂಕ್ ಖಾತೆಗೆ ಹಣವನ್ನು ಎಷ್ಟು ಬೇಕಾದರೂ ಜಮೆ ಮಾಡಬಹುದು. ಯಾವುದೇ ಮಿತಿ ಇಲ್ಲ ಎಂದೂ ಸಹ ಸುತ್ತೋಲೆಯಲ್ಲಿ ಪ್ರಕಟಿಸಲಾಗಿದೆ.

2000 ರೂಪಾಯಿಗಳ ನೋಟನ್ನು RBI ಕಾಯಿದೆ 1934 ರ ಸೆಕ್ಷನ್ 24 (1) ಅಡಿಯಲ್ಲಿ ಪರಿಚಯಿಸಲಾಗಿತ್ತು. ಆದರೆ 2018-19 ಪ್ರಿಂಟ್ ಮಾಡುವುದನ್ನ ಆರ್‌ಬಿಐ ನಿಲ್ಲಿಸಿತ್ತು. 2,000 ರೂಪಾಯಿಯ ಈ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಗಿತ್ತು. ಇದೀಗ ಮತ್ತೇ ನಿರ್ಬಂಧ ವಿಧಿಸಿದ್ದು, ಸಾರ್ವಜನಿಕರು ಮಾತ್ರವಲ್ಲದೇ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.




