Kaddipudi Chandru: ಠಾಣೆ ಮೆಟ್ಟಿಲೇರಿದ “ಲವ್ ಬರ್ಡ್ಸ್ “: ಕೆಲಸ ಮಾಡಿದ ಹಣ ಕೇಳಿದ್ರೆ ಇಂಡಸ್ಟ್ರಿ ಯಲ್ಲಿ ಇರೋದಕ್ಕೆ ಬಿಡೋದಿಲ್ಲ ಎಂದು ಚಂದ್ರುಯಿಂದ ಧಮ್ಕಿ..?

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಟನೆಯ
ಲವ್ ಬರ್ಡ್ಸ್ ಜಟಾಪಟಿ ಠಾಣೆ ಮೆಟ್ಟಿಲೇರಿದೆ. ಹಣಕಾಸು ವಂಚನೆ ಆರೋಪದ ಮೇಲೆ ನಿರ್ದೇಶಕ ಪಿಸಿ ಶೇಖರ್ ಠಾಣೆ ಮೆಟ್ಟಿಲೇರಿದ್ದಾರೆ.

ಕೆಲಸ ಮಾಡಿದ ಹಣ ಕೊಡಿ ಅಂದ್ರೆ ನನ್ನ ಇನ್ಲ್ಪುಯನ್ಸ್ ಇಲ್ಲದೇ ಹೇಗೆ ಇರ್ತೀಯಾ..? ಕನ್ನಡ ಇಂಡಸ್ಟ್ರಿ ಯಲ್ಲಿ ಇರೋದಕ್ಕೆ ಬಿಡೋದಿಲ್ಲ ಎಂದು ಲವ್ ಬರ್ಡ್ಸ್ ಚಿತ್ರದ ನಿರ್ಮಾಪಕ ಚಂದ್ರು ಧಮ್ಕಿ ಹಾಕ್ತಿದ್ದಾರೆಂದು ರೊಮಿಯೋ’ ಖ್ಯಾತಿಯ ನಿರ್ದೇಶಕ ಪಿಸಿ ಶೇಖರ್ ದೂರಿದ್ದಾರೆ.

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಚಂದ್ರು ವಿರುದ್ಧ ದೂರು ದಾಖಲಿಸಿರುವ ಪಿಸಿ ಶೇಖರ್, ಹದಿನೆಂಟೂವರೆ ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ. ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ ಹಣ ತಡೆ ಹಿಡಿದಿದ್ದಾರೆ. ಹಣ ಕೇಳಲು ಹೋದರೆ ನನ್ನ ಬಗ್ಗೆಯೇ ಕೆಟ್ಟದಾಗಿ ಚಿತ್ರರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ ಎಂದು ಪಿ.ಸಿ. ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಬಗ್ಗೆ ಮಾತನಾಡಿದ ನಿರ್ದೇಶಕ ಶೇಖರ್, ಲವ್ ಬರ್ಡ್ಸ್ ನನ್ನ 10 ನೇ ನಿರ್ದೇಶನದ ಸಿನಿಮಾ. ಕಡ್ಡಿಪುಡಿ ಚಂದ್ರು ಈ ಸಿನಿಮಾದ ನಿರ್ಮಾಪಕ. ಸಿನಿಮಾ ನಿರ್ದೇಶನಕ್ಕೆ 25 ಲಕ್ಷ ಎಂಬ ಮಾತುಕತೆ ನಡೆಯಿತು. ಆದರೆ ಕೆಲಸ ಸ್ಟಾರ್ಟ್ ಆದ್ಮೇಲೆ ಕೆಲಸ ಮಾಡಿಸ್ತಲೇ ಹೋದ್ರು. ಯಾವತ್ತೂ ಹಣ ಕೊಡ್ಲಿಲ್ಲ. ಸಿನಿಮಾ ಕೊನೆಯಲ್ಲಿ 4.5 ಲಕ್ಷ ಕೊಟ್ಟರು. ಬಳಿಕ ನನ್ನ ಪರವಾಗಿ ಮಿಲನಾ ನಾಗರಾಜ್ ಬಂದು ಮಾತನಾಡಿದಾಗ 2 ಲಕ್ಷ ಕೊಟ್ಟರು. ಒಟ್ಟು 6.5 ಲಕ್ಷ ಕೊಟ್ಟಿದ್ದಾರೆ. 18.5 ಲಕ್ಷ ಬಾಕಿ ಇದೆ. ಹಣ ಕೊಟ್ಬಿಡ್ತೀನಿ ಎಂದು ಪ್ರಾರಂಭದಲ್ಲಿ ಚನ್ನಾಗಿ ಮಾತನಾಡ್ತಿದ್ರು. ಸಿನಿಮಾ ಮುಗಿದ ನಂತರ ಮಾತನಾಡೋದನ್ನೇ ನಿಲ್ಲಿಸಿದರು. ಹಣ ಕೇಳಿದ್ರೆ ನನ್ನ ಇನ್ಲ್ಪುಯನ್ಸ್ ಇಲ್ಲದೇ ಹೇಗೆ ಇರ್ತೀಯಾ..?
ಕನ್ನಡ ಇಂಡಸ್ಟ್ರಿ ಯಲ್ಲಿ ಇರೋದಕ್ಕೆ ಬಿಡೋದಿಲ್ಲ ಎಂದು ಧಮ್ಕಿ ಹಾಕಲು ಶುರುಮಾಡಿದರು ಎಂದು ತಿಳಿಸಿದ್ದಾರೆ.

More News