BRIJ BHUSHAN SINGH: ನಾರ್ಕೋ ಪರೀಕ್ಷೆಗೂ ಸಿದ್ದನಿದ್ದೇನೆ : ಬಿಜೆಪಿ ಎಂಪಿ ಬ್ರಿಜ್ ಭೂಷಣ್ ಸಿಂಗ್

ನವದೆಹಲಿ : ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಪ್ರತಿಕ್ರಯಿಸಿದ್ದು, ತಾವು ನಾರ್ಕೋ ಪರೀಕ್ಷೇಗೆ ಒಳಗಾಗಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ನಾರ್ಕೋ, ಪಾಲಿಗ್ರಾಫ್ ಅಥವಾ ಇನ್ನಾವುದೇ ಪರೀಕ್ಷೆಗೆ ಒಳಗಾಗಲು ನಾನು ಸಿದ್ದನಿದ್ದೇನೆ ಎಂದು ತಿಳಿಸಿದ ಅವರು, ನನ್ನ ವಿರುದ್ದ ಆರೋಪವೆಸಗಿರುವ ನಿನೇಶ್ ಪೊಗಟ್ ಮಚ್ಚು ಬದರಂಗ್ ಪೊನಿಯಾ ಅವರನ್ನೂ ಸಹ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕುಸ್ತಿ ಪಟುಗಳಾದ ವಿನೇಶ್ ಪೂಗಟ್ ಮತ್ತು ಭಜರಂಗ್ ಪೊನಿಯಾ ಅವರು ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಸತ್ಯ ಪತ್ತೆಗಾಗಿ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಅವರನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಬೇಕೆಂದು ಸಾಮಾಜಿಕ ಜಾಲದ ಮೂಲಕ ಆಗ್ರಹಿಸಿದ್ದರು.
ನಾನು ನನ್ನ ಮಾತಿಗೆ ಇಂದು ಕೂಡ ಬದ್ದನಿದ್ದೇನೆ, ನಾನು ಪರೀಕ್ಷೆಗೆ ಸಿದ್ದವಿರುವುದಾಗಿ ವಚನ ನೀಡಲು ಬಯಸುತ್ತೇನೆ. ಇಬ್ಬರೂ ಕುಸ್ತಿಪಟುಗಳು ಸಿದ್ದರಾದರೆ ನಾನು ಸಿದ್ದ ಎಂದು ತಿರುಗೇಟು ನೀಡಿದ್ದಾರೆ.

ಕುಸ್ತಿಪಟುಗಳು ಕಳೆದ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಸುಪ್ರಿಂಕೋರ್ಟ್ ನಿರ್ದೇಶನದ ಮೇಲೆರೆ ದೆಹಲಿ ಪೊಲೀಸರು, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಕ್ರೀಡಾ ಸಚಿವಾಲಯವು ಸಂಪೂರ್ಣ ತನಿಖೆ ಮುಗಿಯುವವರೆಗೆ ಕುಸ್ತಿ ಫೆಡರೇಷನ್ ನ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

More News