ನವದೆಹಲಿ : ಸಂವಿಧಾನದ ಬಗ್ಗೆ ನನ್ನ ತಿಳುವಳಿಕೆ ಏನೆಂದರೆ ಪ್ರಧಾನಿ ದೇಶಕ್ಕಾಗಿ ಕೆಲಸ ಮಾಡುತ್ತಾರೆ – ಪ್ರಧಾನಿಯೇ ದೇಶವಲ್ಲ, ಹಾಗೆಯೇ ಸರ್ಕಾರ ದೇಶಕ್ಕಾಗಿ ಕೆಲಸ ಮಾಡುತ್ತದೆ, ಸರ್ಕಾರವೇ ದೇಶವಲ್ಲ ಎಂದು ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.
Amit Shah :
— Kapil Sibal (@KapilSibal) May 22, 2023
“Insult to PM is insult to country”
Amitji my understanding of the constitution is that :
PM works for the country
PM is not the country
Just as :
Government works for the country
Government is not the country
ಪ್ಪಧಾನಿಗಳಿಗೆ ಮಾಡಿದ ಅವಮಾನ ದೇಶಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ. ಮೋದಿ ಸಮುದಾಯದ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪ್ರದಾನಿ ಮೋದಿ ಅವರು ಒಬಿಸಿ ಸಮುದಾಯಕ್ಕೆ ಅರ್ಹ ಗೌರವ ನೀಡಿದ್ದಾರೆ, ಅವರುಗಳ ನೋವನ್ನು ಅವರು ಸಮರ್ಥವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಹಾಗೆಯೇ ಮುಂದುವರೆದು ಮಾತನಾಡಿದ ಅವರು ಯಾರೋಬ್ಬರು ಒಬ್ಬ ವ್ಯಕ್ತಿಯನ್ನು ಅವಮಾನಿಸಿದರೆ ಅದು ದೊಡ್ಡ ವಿಷಯವಲ್ಲ, ಆದರೆ, ಯಾರಾದರೂ ಇಡೀ ಸಮುದಾಯವನ್ನು ಮತ್ತು ಪ್ರಧಾನಿಯನ್ನು ಅವಮಾನಿಸಿದರೆ ಅದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದಿದ್ದರು. ಈ ಸಂಬಂಧ ಕಪಿಲ್ ಸಿಬಲ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.




