M B PATIL V/S D K SURESH: ವಿಧಾನಸೌಧದಲ್ಲಿ ಎಂಬಿ ಪಾಟೀಲ್ ಗೆ ಡಿಕೆ ಸುರೇಶ್ ವಾರ್ನಿಂಗ್: ಏನ್ರೀ ಇದು ರೌಡಿಸಂ ಎಂದು ಬೆಚ್ಚಿದ ಶಾಸಕರು

ಬೆಂಗಳೂರು : ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಎಂಬ ಸಚಿವ ಎಂ ಬಿ ಪಾಟೀಲ್ ರ ಹೇಳಿಕೆ ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.
ಇಂದು ಶಾಸಕಾಂಗ ಸಭೆಗೂ ಮುನ್ನಾ ಎಂಬಿ ಪಾಟೀಲ್ ಹಾಗೂ ಡಿಕೆ ಸುರೇಶ್ ಮುಖಾಮುಖಿಯಾಗಿದ್ದರು. ಈ ವೇಳೆ ಎಂಬಿ ಪಾಟೀಲ್ ಗೆ ಬಹಿರಂಗವಾಗಿ ಡಿಕೆ ಸುರೇಶ್ ವಾರ್ನಿಂಗ್ ಮಾಡಿದ್ದು, ಈ ಘಟನೆಯನ್ನು ನೋಡಿದ ಶಾಸಕರು ಶಾಕ್ ಆಗಿದ್ದಾರೆ. ವಿಧಾನಸೌಧದಲ್ಲಿ ಮುಖಾಮುಖಿಯಾದ ಎಂಬಿ ಪಾಟೀಲ್ ಅವರನ್ನು ಮೊದಲಿಗೆ ಗುರಾಯಿಸಿದ ಡಿಕೆ.ಸುರೇಶ್, “ಇದೆಲ್ಲಾ ಸರಿ ಇರಲ್ಲ” ಎಂದು ಎಚ್ಚರಿಕೆ ನೀಡಿದರು, ಇದನ್ನು ನೋಡಿದ ಶಾಸಕರು ಕೆಲಕಾಲ ಕಕ್ಕಾಬಿಕ್ಕಿಯಾದರು.

ಇನ್ನು ಡಿಕೆ ಸುರೇಶ್ ಮಾತಿನ ಧಾಟಿಗೆ ದಂಗಾದ ಕೆಲ ಶಾಸಕರು “ಏನ್ರಿ ಇದು ಈ ತರ ರೌಡಿಸಂ.. ರೌಡಿ ತರಹ ವಾರ್ನಿಂಗ್ ಕೊಡ್ತಿದ್ದೀರಲ್ಲ ಎಂದು ನೇರವಾಗಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕಂಡ ಎಂಬಿ ಪಾಟೀಲ್, ಡಿಕೆಸುರೇಶ್ ಕೈ ಹಿಡಿದು ಬನ್ನಿ ಚೇಂಬರ್ ಗೆ ಎಂದಿದ್ದಾರೆ. ಆದರೆ ಸುರೇಶ್ ಅವರು ಮತ್ತೇ ಎಂಬಿ ಪಾಟೀಲ್ ರನ್ನು ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ವಾರ್ನ್ ಮಾಡಿದ್ದಾರೆ.
ಡಿಕೆ ಸುರೇಶ್ ವರ್ತನೆಯಿಂದ ಶಾಸಕರ ಸುತ್ತಲಿದ್ದ ಗನ್ ಮ್ಯಾನ್, ಪಿಎ ಕ್ಷಣ ಕಾಲ ಅವಾಕ್ಕಾಗಿ ನೋಡುತ್ತಿದ್ದರು. ಘಟನೆ ತಿಳಿಗೊಳಿಸುವ ಕಾರಣ ಎಂಬಿ ಪಾಟೀಲ್ ಅವರು, ಡಿಕೆ ಸುರೇಶ್ ಕೈಬಿಟ್ಟು ಮೌನವಾಗಿ ತೆರಳಿದರು. ಡಿಕೆ ಸುರೇಶ್ ವಾರ್ನಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ‌, ಆಮೇಲೆ ಮಾತಾಡ್ತೀನಿ ಎಂದು ತೆರಳಿದರು.

ಇನ್ನು ಘಟನೆ ಬಗ್ಗೆ ಮಾತನಾಡಿದ ಸಂಸದ ಡಿಕೆ ಸುರೇಶ್, ಎಂಪಿ ಪಾಟೀಲ್ ಅವರೇ ಸಿಎಂ ಆಗಲಿ ಬಿಡಿ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಮತ್ತೇ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ಐದು ವರ್ಷ ಮತ್ತೇ ಸಿಎಂ ಆಗಲಿ. ಯಾರು ಬೇಡ ಅಂದಿದ್ದಾರೆ. ಅಥವಾ ಎಂಬಿ ಪಾಟೀಲ್ ಅವರೇ ಸಿಎಂ ಆದರೆ ಸಂತೋಷ. ಬೇಡ ಅಂದವರು ಯಾರು ಎಂದು ಪರೋಕ್ಷವಾಗಿ ಗುಡುಗಿದ್ದಾರೆ.
ಇನ್ನು ವಿಧಾನಸೌಧದಲ್ಲಿ ಎಂ.ಬಿ ಪಾಟೀಲ್ ಗೆ ವಾರ್ನ್ ಮಾಡಿದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ನಾನೇನು ಮಾತನಾಡಲಿಲ್ಲವಲ್ಲ. ಎಂ.ಬಿ ಪಾಟೀಲ್ ಗೆ ನಾನೇನು ಹೇಳಲಿ..? ನಿನ್ನೆನೇ ಎಲ್ಲವನ್ನೂ ಹೇಳಿದ್ದೇನಲ್ಲಾ. ನಾನು ಅವರಿಗೆ ಏನೂ ಮಾಡಲಿಲ್ಲ ವ್ಯಂಗ್ಯವಾಗಿ ಉತ್ತರಿಸಿದರು.

More News