ನನ್ನ ಇಬ್ಬರು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ, ನಿತ್ಯಾನಂದನ ಜೊತೆಗೆ ಇದ್ದಾರೆ ಎಂದು ನಟ ಅಶೋಕ್ ಕುಮಾರ್ ಕಣ್ಣೀರಿಟ್ಟಿದ್ದಾರೆ.
ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದ ಅಶೋಕ್ ಕುಮಾರ್, ಸಿನಿಮಾರಂಗದಲ್ಲಿ ಅವಕಾಶ ಕಾಣದೆ ಚಿತ್ರರಂಗದಿಂದ ದೂರ ಸರಿದಿದ್ದರು. ಇತ್ತೀಚೆಗೆ ಖಾಸಗಿ ವಾಹಿನಿ ಯಲ್ಲಿ ಸಂದರ್ಶನ ನೀಡಿದ್ದ ನಟ ಅಶೋಕ್ ಕುಮಾರ್, ತಮ್ಮ ಹೆಣ್ಣು ಮಕ್ಕಳ ಬಗ್ಗೆ ನೆನೆದು ಕಣ್ಣೀರು ಹಾಕಿದ್ದಾರೆ.
ನಿತ್ಯಾನಂದ ಜೊತೆ ನನ್ನ ಮಗಳು ರಂಜಿತಾ ಇದ್ದಾಳೆ ಎಂದು ಜನ ಹೇಳ್ತಾರೆ. ರಂಜಿತಾ- ನಿತ್ಯಾನಂದು ನಡುವಿನ ರಿಲೇಷನ್‌ಶಿಪ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆ ಫೋಟೋಗಳನ್ನ ನೋಡಿದರೆ ಏನ್ ಹೇಳಬೇಕೋ ಗೊತ್ತಾಗುತ್ತಿಲ್ಲ. ನನಗೆ ಮೂವರು ಹೆಣ್ಣು ಮಕ್ಕಳು. ಅವರು ಇಷ್ಟ ಪಟ್ಟಂತೆ. ಅವರು ಪ್ರೀತಿಸಿದವರ ಜೊತೆಗೆ ವಿವಾಹ ಮಾಡಿಕೊಟ್ಟೆ. ನನ್ನ ಮೊದಲನೇ ಮಗಳು ಅಮೆರಿಕಾದಲ್ಲಿ ಇದ್ದಳು. ಆದರೆ ಆಕೆ ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಮೊದಲ ಮಗಳ ಜೊತೆಗೆ ನನ್ನ 2ನೇ ಮಗಳು ರಂಜಿತಾ ಸಹ ಹೋಗಲು ಆರಂಭಿಸಿದ್ದಳು. ಇದರಿಂದಾಗಿ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಆದವು. ಬರು ಬರುತ್ತ ತಮ್ಮ ಗಂಡಂದಿರಿಗೆ ವಿಚ್ಚೇದನ ನೀಡಿ, ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ ಎಂದು ಅಳಲು ತೋಡಿಕೊಂಡರು.

ನನಗೀಗ 80 ವರ್ಷ ವಯಸ್ಸು. ನನ್ನನ್ನು ನನ್ನ 3ನೇ ಮಗಳು ನೋಡಿಕೊಳ್ತಿದ್ದಾಳೆ. ನನ್ನ ಮಕ್ಕಳಿಬ್ಬರೂ ಇಂದಿಗೂ ನಿತ್ಯಾನಂದನ ಆಶ್ರಮದಲ್ಲೇ ಇದ್ದಾರೆ. ಇಂದಿಗೂ ನನ್ನ ಮಕ್ಕಳು ನನಗೆ ಕರೆ ಮಾಡಿಲ್ಲ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಕಣ್ಣೀರು ಹಾಕಿದರು.




