ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಕೊಟ್ಟ ಹೇಳಿಕೆ ಸಂಬಂಧ ಈಗ ಪ್ರಕರಣ ದಾಖಲಾಗಿದೆ.
ಇನ್ನು ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಕುರಿತು ಸದಾಶಿವನಗರದಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದನೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಟಿಪ್ಪು ಸುಲ್ತಾನ್ ಮೇಲಿನ ಸಿದ್ದು ಪ್ರೇಮದ ಬಗ್ಗೆ ಹೇಳಿ, ಕಾಂಗ್ರೆಸ್ ಸೋಲಿಸಬೇಕು ಎಂಬ ಅರ್ಥದಲ್ಲಿ ಹೇಳಿದ್ದೇನೆ.

ಯಾರನ್ನೂ ಹಾನಿ ಮಾಡಲು, ತೊಂದರೆ ಕೊಡಲು ಹೇಳಿಕೆ ಕೊಟ್ಟಿಲ್ಲ. ನಾನು ಯಾವತ್ತಿಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಅವರ ಮನಸ್ಸಿಗೆ ನೋವು ಆಗಿದ್ರೆ ಈಗಾಗಲೇ ಅವರಿಗೆ ವಿಷಾದ ಕೂಡ ವ್ಯಕ್ತಪಡಿಸೋದಾಗಿ ಹೇಳಿದ್ದೇನೆ. ಆದರೆ ಮುಗಿದು ಹೋಗಿರುವ ವಿಷಯವನ್ನು ಮತ್ತೊಮ್ಮೆ ಸಿಎಂ, ಡಿಸಿಎಂ ಪೊಲೀಸರ ಸಭೆಯಲ್ಲಿ ಪ್ರಸ್ತಾಪಿಸಿ, ಯಾಕೆ ಅವರ ಮೇಲೆ ಇನ್ನೂ ಕೇಸ್ ಹಾಕಿಲ್ಲ ಅಂತ ನನ್ನ ಮೇಲೆ ಇವಾಗ ಕೇಸ್ ಹಾಕಿಸಿದ್ದಾರೆ. ಇದರಿಂದಲೇ ಗೊತ್ತಾಗ್ತಿದೆ ದ್ವೇಷದ ರಾಜಕಾರಣ, ಅಧಿಕಾರ ದುರ್ಬಳಕೆ ಮಾಡಿಕೊಳ್ತಿರೋದು ಎಂದು ದೂರಿದರು.

ನಾನು ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕ ಎದುರಿಸುವ ಕೆಲಸ ಮಾಡುತ್ತೇನೆ. ನಾವು ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಇವ್ರು ಪೇ ಸಿಎಂ, ೪೦ ಪರ್ಸೆಂಟ್ ಕಮಿಷನ್ ಅಂತೆಲ್ಲ ಮಾಡಿದ್ರು. ಇವ್ರು ಇಷ್ಟೆಲ್ಲಾ ಮಾಡಿದ್ರು ನಾವು ಸಾಫ್ಟ್ ಆಗಿ ಇದ್ವೇ ಹೊರತು, ಯಾವತ್ತಿಗೂ ಕೇಸ್ ಹಾಕುವ ಕೆಲಸ ಮಾಡಿಲ್ಲ. ಇವಾಗ ನನ್ನ ಮೇಲೆ ಅಟೆಂಪ್ಟ್ ಮರ್ಡರ್ ಕೇಸ್ ಹಾಕಿದ್ದಾರೆ.
ಮುಖ್ಯಮಂತ್ರಿಗಳ ಉಪಸ್ಥಿತಿ ಯಲ್ಲೇ ಈ ರೀತಿ ನಡೀತ್ತಿದೆ ಅಂದರೆ ಏನು ಅರ್ಥ..? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಎದುರಿಸುವ ಶಕ್ತಿಯನ್ನು ಭಗವಂತ ನಮಗೂ ಕೊಟ್ಟಿದ್ದಾನೆ. ನಿಮಗೆ ಅಧಿಕಾರ ತಲೆಗೆ ಹೋಗಿದೆ. ಇದಕ್ಕೆಲ್ಲಾ ನಾನು ಹೆದರುವ ಭಯ ಪಡುವ ಮಾತೇ ಇಲ್ಲ
ಗಾಜಿನ ಮನೆಯಲ್ಲಿ ಇರೋರಿಗೆ ಇಷ್ಟು ಆದರೆ, ನಾವು ನ್ಯಾಯಯುತ ವಾಗಿ ಇರೋರಿಗೆ ಇನ್ನೂ ಎಷ್ಟು ಇರಬಾರದು. ಇಂತಹದ್ದೆಲ್ಲ ನೋಡೋಕೆ ನಾವು ರೆಡಿ ಇದ್ದೇವೆ,ಅವ್ರು ಬರಲಿ, ಕಾನೂನಿನಲ್ಲಿ ನಾತ ಹೊಡೆಯೋರೆ ಇಷ್ಟು ಮಾತನಾಡಬೇಕಾದರೆ, ನಾವು ನ್ಯಾಯ ಪಾಲನೆ ಮಾಡೋರು ನಮಗೆ ಇನ್ನೂ ಎಷ್ಟು ಧೈರ್ಯ ಇರಬಾರದು..? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ದೂರಿದರು.
ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಫೋಸ್ಟಿಂಗೋ ಅಥವಾ ಇವರ ಮಾತು ಕೇಳಿ ಅಧಿಕಾರ ದುರ್ಬಳಕೆ ಮಾಡಿಕೊಂಡ್ರೆ ಪೊಲೀಸರೂ ಕಾನೂನಾತ್ಮಕ ಕ್ರಮ ಎದುರಿಸಬೇಕು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಪೊಲೀಸರಿಗೂ ಎಚ್ಚರಿಕೆ ಕೊಟ್ಟಿದ್ದಾರೆ.




