Cabinet Ministers: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಶನಿವಾರ ವೇ ಪ್ರಮಾಣ ವಚನ ಸ್ವೀಕಾರ..?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಶನಿವಾರ, ಮೇ 27 ರಂದೇ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಯ ಸರಣಿ ಸಭೆ ಬಳಿಕ ಪಟ್ಟಿ ಸಿದ್ದಪಡಿಸಿದ್ದು, ಶನಿವಾರ 20 ರಿಂದ 22 ಮಂದಿ ನೂತನ ಸಚಿವರಾಗಿ‌ ಪದಗ್ರಹಣ ಸಾಧ್ಯತೆ ಇದೆ. ಶನಿವಾರ ರಾಹುಕಾಲ ಮುಗಿದ ಬಳಿಕ ಪದಗ್ರಹಣ ಪಡೆಯುವ ಸಾಧ್ಯತೆ ಇದೆ. 27 ರಂದು 11.45 AM ಗಂಟೆಗೆ ಪ್ರಮಾಣ ವಚನ ತೆಗೆದುಕೊಳ್ಳಬಹದು. ಆದರೆ ರಾಜ್ಯ ಪಾಲ ಥಾವರ್‌ಚಂದ್ ಗೆಹಲೋಟ್ ರ ಕಛೇರಿಯಿಂದ ಸಮಯಾವಕಾಶ ಬಗ್ಗೆ ಧೃಡಪಡಿಸಿಲ್ಲ.

ಸಂಭಾವ್ಯ ಸಚಿವರು ಯಾರ್ಯಾರು..?

ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳಕರ್
ಶಿವಾನಂದ ಪಾಟೀಲ್
ದರ್ಶನಾಪುರ
ರಾಯರೆಡ್ಡಿ
ಡಾ. ಮಹಾದೇವಪ್ಪ
ಪಿರಿಯಾಪಟ್ಟಣ ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಪುಟ್ಟರಂಗ ಶೆಟ್ಟಿ
ಚಿಂತಾಮಣಿ ಸುಧಾಕರ್
ಹಿರಿಯೂರು ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಮಧುಗಿರಿ ರಾಜಣ್ಣ
ಸಂತೋಷ್ ಲಾಡ್
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ ತಂಗಡಗಿ
ತಿಮ್ಮಾಪುರ
ರುದ್ರಪ್ಪ ಲಮಾಣಿ
ಶರಣ ಪ್ರಕಾಶ್ ಪಾಟೀಲ್

More News