Siddaramaiah Cabinet: ನಾಳೆ 24 ಶಾಸಕರಿಗೆ ಖಾತೆ ಹಂಚಿಕೆಗೆ ಮುಹೂರ್ತ ಫಿಕ್ಸ್: ಹಿರಿಯ ಶಾಸಕರಿಗೆ “ಕೈ” ತಪ್ಪಲಿದ್ಯಾ ಸಚಿವ ಸ್ಥಾನ..?

ಬೆಂಗಳೂರು: ಸಿಎಂ ಸಿದ್ದರಾಮಯ್ಯರ ಸಚಿವ ಸಂಪುಟ ಸರ್ಕಸ್ ಕೊನೆ ಹಂತಕ್ಕೆ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ಸಚಿವರ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಿರಂತರ ಸಭೆ ನಡೆಸಿದ ಕೈ ನಾಯಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​ ಬಣಕ್ಕೆ ಸಮಾನ ಪ್ರಾತಿನಿಧ್ಯ ನೀಡಿದ್ದಾರಂತೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಂದ ಪ್ರತ್ಯೇಕ ಆಪ್ತರ ಪಟ್ಟಿಯಲ್ಲಿ ಇಬ್ಬರ ಆಪ್ತರಿಗೂ ಪ್ರಾತಿನಿಧ್ಯ ನೀಡಿವ ಮೂಲಕ ತಮ್ಮದೇ ಒಂದು ಪಟ್ಟಿ ಸಿದ್ದಮಾಡಿದ್ದು, ಬಹುತೇಕ ಸಂಪುಟದ ಎಲ್ಲಾ ಹೆಸರುಗಳನ್ನ ಅಂತಿಮಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಳೆ ಶನಿವಾರ ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರಿನ ರಾಜಭವನದಲ್ಲಿ ಆಗಲಿದೆ. ಈ ಕುರಿತು ರಾಜ್ಯಪಾಲರಿಗೆ ಕೆಪಿಸಿಸಿಯಿಂದ ಮಾಹಿತಿ ನೀಡಿದ್ದು, ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ಬೆಳಗ್ಗೆ 11.45ಕ್ಕೆ 24 ಮಂದಿ‌ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರಿಗೂ ನಾಳೆಯೇ ಖಾತೆಗಳ ಹಂಚಿಕೆ ಮಾಡಲಾಗುತ್ತದೆ.

ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಭಿ ನಡೆಸಿದ್ದ ಹಿರಿಯರಿಗೆ ನಿರಾಸೆ

ಇನ್ನು ಹೈಕಮಾಂಡ್ ಸಿದ್ದಪಡಿಸಿದ ಸಚಿವರ ಪಟ್ಟಿಯಲ್ಲಿ
ಹಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಲಿದೆ. ಡಿಸಿಎಂ ಆಕಾಂಕ್ಷೆ ಹೊಂದಿದ್ದ ಬಿಕೆ ಹರಿಪ್ರಸಾದ್ ಗೆ ಸಚಿವ ಸ್ಥಾನವೂ ಸಿಗುವ ಡೌಟ್ ಇದೆ. ಅಲ್ಲದೇ ಹಿರಿಯ ನಾಯಕರಾದ ಆರ್​​.ವಿ.ದೇಶಪಾಂಡೆ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಕೈತಪ್ಪಲಿದೆ. ಕೈ ಹೈಕಮಾಂಡ್ ಸಿದ್ದಪಡಿಸಿದ ಪಟ್ಟಿಯಲ್ಲಿ ಹಲವು ಜಿಲ್ಲೆಗಳಿಗೆ ಸಂಪುಟದಲ್ಲಿ ಸಚಿವ ಸ್ಥಾನವೇ ನೀಡಿಲ್ಲ. ಜೊತೆಗೆ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳ ಸೇರ್ಪಡೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

More News