ಬೆಂಗಳೂರು: ಬಹು ನಿರೀಕ್ಷಿತ ಸಚಿವ ಖಾತೆ ಜಟಾಪಟಿ ಕೊನೆಗೂ ರಿವೀಲ್ ಆಗಿದೆ. ದೆಹಲಿ ಯಲ್ಲಿ ಹೈವೋಲ್ಟೇಜ್ ಮೀಟಿಂಗ್ ಬಳಿಕ ಕೊನೆಗೂ ಸಚಿವರ ಪಟ್ಟಿಯನ್ನು ಕೈ ಹೈಕಮಾಂಡ್ ಬಿಡುಗಡೆ ಮಾಡಿದೆ.
ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಜಾತಿವಾರು, ಪ್ರದೇಶವಾರು, ಆಪ್ತರ ಬಣದ ನಾಯಕರಿಗೆ ಆದ್ಯತೆ ನೀಡಿದ್ದು, ಸಚಿವ ಸ್ಥಾನದಲ್ಲೂ ಸಿದ್ದು ಮೇಲುಗೈ ಸಾಧಿಸಿದ್ದಾರೆ. ತಮ್ಮ ಆಪ್ತರಿಗೆ ಹೆಚ್ಚು ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿಗೆಲ್ಲಾ ಸಚಿವ ಖಾತೆ ಭಾಗ್ಯ..?
ಕೆ.ಎನ್.ರಾಜಣ್ಣ
ಪಿರಿಯಾಪಟ್ಟಣ ವೆಂಕಟೇಶ್
ಬಸವರಾಜ ರಾಯರೆಡ್ಡಿ
ಕೃಷ್ಣಬೈರೇಗೌಡ
ಎಂ.ಕೃಷ್ಣಪ್ಪ
ಹೆಚ್.ಸಿ.ಮಹದೇವಪ್ಪ
ಸಂತೋಷ್ ಲಾಡ್
ಬೈರತಿ ಸುರೇಶ್
ಪುಟ್ಟರಂಗ ಶೆಟ್ಟಿ
ಈಶ್ವರ್ ಖಂಡ್ರೆ
ರಹೀಂಖಾನ್
ಶಿವರಾಜ್ ತಂಗಡಗಿ
ಜಮೀರ್ ಅಹ್ಮದ್ ಖಾನ್( ಹಾಲಿ)
ಎಂ.ಬಿ.ಪಾಟೀಲ್( ಹಾಲಿ)
ಡಿಕೆಶಿ ಆಪ್ತರು
ಮಧು ಬಂಗಾರಪ್ಪ
ಡಿ.ಸುಧಾಕರ್
ಚೆಲುವರಾಯಸ್ವಾಮಿ
ಮಂಕಾಳ ವೈದ್ಯ
ಎಂ.ಸಿ.ಸುಧಾಕರ್
ಲಕ್ಷ್ಮಿ ಹೆಬ್ಬಾಳ್ಕರ್
ಹೈಕಮಾಂಡ್ ಆಯ್ಕೆ
ಶರಣಪ್ರಕಾಶ್ ಪಾಟೀಲ್
ರುದ್ರಪ್ಪ ಲಮಾಣಿ
ಹೆಚ್.ಕೆ.ಪಾಟೀಲ್
ಶಿವಾನಂದ ಪಾಟೀಲ್
ಎಸ್.ಎಸ್.ಮಲ್ಲಿಕಾರ್ಜುನ್
ಶರಣಬಸಪ್ಪ ದರ್ಶನಾಪೂರ
ಡಾ.ಪರಮೇಶ್ವರ್( ಹಾಲಿ)
ಕೆ.ಜೆ.ಜಾರ್ಜ್( ಹಾಲಿ)
ರಾಮಲಿಂಗಾರೆಡ್ಡಿ( ಹಾಲಿ)
ಪ್ರಿಯಾಂಕ್ ಖರ್ಗೆ( ಹಾಲಿ)
ಕೆ.ಹೆಚ್.ಮುನಿಯಪ್ಪ( ಹಾಲಿ)
ಸತೀಶ್ ಜಾರಕಿಹೊಳಿ( ಹಾಲಿ)
ಆದರೆ ಬಿಡುಗಡೆ ಕಂಡ ಪಟ್ಟಿಯಲ್ಲಿ ಬಿಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ ಸೇರಿದಂತೆ ಅನೇಕ ನಾಯಕರಿಗೆ ಕೋಕ್ ನೀಡಲಾಗಿದೆ. ಅಲ್ಲದೇ ಬಿಜೆಪಿಯಿಂದ ಬಂಡಾಯ ಎದ್ದು ಬಂದ ಮಾಜಿ ಸಚಿವ ಲಕ್ಷಣ್ ಸವದಿ ಹೆಸರು ಪಟ್ಟಿಯಿಂದ ಕೈ ಬಿಡಲಾಗಿದೆ. ಹೀಗಾಗಿ ಬಿಡುಗಡೆ ಕಂಡಿರುವವರಲ್ಲಿ ಒಬ್ಬರನ್ನು ಕೈ ಬಿಟ್ಟು
ಲಕ್ಷಣ್ ಸವದಿರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.




