Siddha Rajayogindra Swami: ಶೆಟ್ಟರ್ ಹಾಗೂ ಸವದಿಗೆ ಸಚಿವ ಸ್ಥಾನ ಕೊಟ್ರೆ ಕಾಂಗ್ರೆಸ್ ಗೆ ಒಳ್ಳೆಯದು: ಸಿದ್ದರಾಜಯೋಗಿಂದ್ರ ಸ್ವಾಮೀಜಿ

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಅವಕಾಶ ಕೊಡಬೇಕಿತ್ತು. ಕೊಟ್ಟರೆ ಕಾಂಗ್ರೆಸ್ ಗೆ ಒಳ್ಳೆಯದು‌ ಎಂದು ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

ಇಂದು 24 ಮಂದಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮಾಡಲಾಯ್ತು. 24 ಮಂದಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂಡಾಯವೆದ್ದು ಹೊರ ಬಂದ ಲಕ್ಷಣ್ ಸವದಿ ಹಾಗೂ ಶೆಟ್ಟರ್ ರನ್ನು ಹೊರಗಿಲಾಗಿದೆ. ಈ ಬಗ್ಗೆ ಮಾತನಾಡಿದ ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಶೆಟ್ಟರ್ ಹಾಗೂ ಸವದಿಗೆ ಸಚಿವ ಸ್ಥಾನ ಕೊಡಬೇಕಿತ್ತು ಎಂದರು.

ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು, ಇಂದು ಆಗದಿದ್ರೆ ಮುಂದಾದರೂ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ಅವರ ಧರ್ಮ. ಶೆಟ್ಟರ್ ಹಾಗೂ ಸವದಿ ಒಳ್ಳೆ ಅನುಭವಿ ರಾಜಕಾರಣಿಗಳು. ಸಜ್ಜನ,ಸಾತ್ವಿಕ ರಾಜಕಾರಣಿಗಳು,ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು.
ಅವರ ಅನುಭವ ಪಕ್ಷ ಬಳಸಿಕೊಳ್ಳಬೇಕು..
ನಾನು ಅವರಿಗೆ ಸಚಿವ ಸ್ಥಾನ ಕೊಡಲು ಒತ್ತಾಯ ಮಾಡ್ತೀನಿ ಎಂದರು.

ಮುಂದುವರೆದು ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಲಿಂಗಾಯತರನ್ನು ಕಡೆಗಣಿಸಿದ ಹಾಗೆ ಕಾಣಲ್ಲ.ಇನ್ನು ಅವಕಾಶ ಇದೆ,ಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದು. ಶೆಟ್ಟರ್ ಹಾಗೂ ಸವದಿಗೆ ಮಂತ್ರಿ ಸ್ಥಾನ ಕೊಟ್ಟರೆ ಕಾಂಗ್ರೆಸ್ ಗೆ ಒಳ್ಳೆಯದು. ಎಂದು ತಿಳಿಸಿದರು. ಇನ್ನು ಕಾಂಗ್ರೆಸ್ ಗ್ಯಾರೆಂಟಿ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡೇ ಮಾಡತ್ತೆ. ಅದಕ್ಕೆ ಅದರದೇ ಆದ ನೀತಿ ಇರತ್ತೆ ಅದನ್ನು ಜಾರಿಗೆ ತರಬಹುದು. ತರದೆ ಇರೋಕೆ ಸಾಧ್ಯ ಇಲ್ಲ ಎಂದು ಹೇಳಿದರು.

More News