Nawazuddin Siddiqui: ನಾನು ತುಂಬಾ ರೊಮ್ಯಾಂಟಿಕ್ ವ್ಯಕ್ತಿ: ನವಾಜುದ್ದೀನ್ ಸಿದ್ದೀಕಿ

ನಟ ನವಾಜುದ್ದೀನ್ ಸಿದ್ದೀಕಿ ಇತ್ತೀಚಿಗೆ ಹೆಚ್ಚು ಪ್ರೀತಿ ಪ್ರೇಮದ ಬಗ್ಗೆ ಮಾತನಾಡಲು ಶುರುವಿಟ್ಟಿದ್ದಾರೆ. ಪ್ರೀತಿ ಮಾಡುವುದು, ಪ್ರೀತಿಸಲ್ಪಡುವುದು, ಪ್ರೀತಿ ಹಂಚುವುದು ಒಳ್ಳೆಯ ವಿಚಾರ ಎಂದು ಕಾಮೆಂಟಿಸಿದ್ದಾರೆ.

ಇತ್ತೀಚೆಗೆ ಅಷ್ಟೇ ನಟ ಸಿದ್ದೀಕಿ ದಾಂಪತ್ಯ ಕಲಹ ಬೀದಿಗೆ ಬಿದ್ದಿತ್ತು. ಬಹಳ ವರ್ಷದ ಪ್ರೇಮ ಬೀದಿ ಕಾಳಗದ ಮೂಲಕ ಜಗಜ್ಜಾಹಿರಾಯಿತು. ನೀವು ತೀರ ಸಭ್ಯ ಅನ್ಕೊಂಡಿರೋ ನವಾಜುದ್ದೀನ್ ನನ್ನನ್ನು ನಡು ರಾತ್ರಿ ಮನೆ ಬಿಟ್ಟು ಹೊರ ಹಾಕಿದ್ದಾರೆ. ಎರಡು ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗ್ಲಿ ಎಂದು ಪತ್ನಿ ಆಲಿಯಾ ಸಿದ್ದೀಕಿ ವೀಡಿಯೋ ಮಾಡೋ ಮೂಲಕ ಅಳಲನ್ನು ತೋಡಿಕೊಂಡಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ನಟ ಸಿದ್ದೀಕಿ.. ‌ಇತ್ತೀಚೆಗೆ ಮಾರ್ಮಿಕವಾಗಿ ಪ್ರೇಮದ ಕುರಿತು ಮಾತನಾಡಲು ಶುರುವಿಟ್ಟಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಅವರು, ಪ್ರೀತಿ ಮಾಡುವುದು, ಪ್ರೀತಿಸಲ್ಪಡುವುದು, ಪ್ರೀತಿ ಹಂಚುವುದು ಒಳ್ಳೆಯ ವಿಚಾರ. ಪ್ರೀತಿ ತುಂಬಾ ಮುಖ್ಯ. ನಾನು ತುಂಬಾ ರೊಮ್ಯಾಂಟಿಕ್ ವ್ಯಕ್ತಿ. ನಾನು ನನ್ನ ಸಿನಿಮಾ ಹಾಗೂ ಇನ್ನಿತರ ಬಹಳಷ್ಟು ವಿಚಾರಗಳನ್ನು ಇಷ್ಟಪಡುತ್ತೇನೆ ಎಂದಿದ್ದಾರೆ. ಮುಂದುವರೆದು ನಿಜವಾದ ಪ್ರೇಮ ಕಥೆಗಳ ಬಗ್ಗೆ ಮಾತನಾಡಿದ ಅವರು, ಚಿಕ್ಕ ನಗರಗಳಲ್ಲಿ ಮಾತ್ರವೇ ನಿಜವಾದ ಪ್ರೀತಿ ಇರುತ್ತದೆ ಎಂದಿದ್ದಾರೆ. ನಗರಗಳಲ್ಲಿ ಪ್ರೀತಿ ಹೆಸರಲ್ಲಿ ಜನರ ಮಧ್ಯೆ ಹೊಂದಾಣಿಕೆ ಹಾಗೂ ಕಾಂಪ್ರಮೈಸ್ ಆಗುತ್ತದೆ ಅಷ್ಟೆ. ಹಳ್ಳಿಗಳಲ್ಲಿ ಜನರು ಪರಸ್ಪರ ಮುಕ್ತವಾಗಿ ಮಾತನಾಡಲು ಹೆದರುವುದಿಲ್ಲ. ಯಾಕೆಂದರೆ ಅವರು ಪರಸ್ಪರ ಜಡ್ಜ್ ಮಾಡುವುದಿಲ್ಲ ಪರಸ್ಪರ ತಮ್ಮ ಬ್ಯಾಂಕ್ ಬ್ಯಾಲೆನ್ಸ್​ಗಳ ಅರಿವೂ ಕೂಡಾ ಇಲ್ಲದೆ ಅವರು ಪರಸ್ಪರ ಪ್ರೀತಿಸಲಾರಂಭಿಸುತ್ತಾರೆ. ಅದು ನಿಜವಾದ ಪ್ರೇಮ ಎಂದು ಹೇಳಿಕೊಂಡಿದ್ದಾರೆ.

More News