Women’s Free Bus Pass: ಮಹಿಳಾ ಉಚಿತ ಪಾಸ್ ನಾಳೆಯಿಂದಲೇ ಜಾರಿ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು: ಸಾರಿಗೆ ನಿಗಮಗಳ ಎಂಡಿ ಗಳೊಂದಿಗೆ ಸಚಿವ ರಾಮಲಿಂಗ ರೆಡ್ಡಿ ಇಂದು ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ‌ 5 ಗ್ಯಾರಂಟಿ ಗಳಲ್ಲಿ ಪ್ರಮುಖವಾದ ಗ್ಯಾರೆಂಟಿ ಅಂದ್ರೆ ಅದು ಮಹಿಳಾ ಉಚಿತ ಪಾಸ್. ಮಹಿಳಾ ಉಚಿತ ಪಾಸ್ ನಮ್ಮ ಇಲಾಖೆಗೆ ಬರುತ್ತೆ. ನಾಳೆ ಈ ಕುರಿತು ಸಿಎಂ ಜೊತೆ ಸಭೆ ಇದೆ. ಸಭೆ ಬಳಿಕ ಘೋಷಣೆ ಮಾಡಲಾಗುವುದು.
ಎಲ್ಲಾ ಮಹಿಳೆಯರಿಗೆ ಬಸ್ ದರ ಪ್ರೀ ಎಂದು ನಾವು ಈ ಹಿಂದೆಯೇ ಹೇಳಿದ್ದೆವು. ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಇರಲಿದೆ ಎಂದು ತಿಳಿಸಿದರು.

ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೋವಿಡ್ ಸಂಧರ್ಭದಲ್ಲಿ ಸಂಸ್ಥೆ ಗಾದ ನಷ್ಟದ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಪ್ರತಿನಿತ್ಯ 82.51ಲಕ್ಷ ಜನ ಪ್ರಯಾಣ ಮಾಡ್ತಾರೆ. ನಾಲ್ಕು ಸಂಸ್ಥೆ ಯಿಂದ 2313.32ಲಕ್ಷ ಸಾರಿಗೆ ಆದಾಯ ಸಂಗ್ರಹ ವಾಗುತ್ತೆ. ನಾಲ್ಕು ಸಂಸ್ಥೆ ಗಳಿಂದ ಸಾರಿಗೆ ಆದಾಯದ ಮತ್ತು ಇತರೆ ಅದಾಯ ಸೇರಿ 8946.85ಕೋಟಿ ಇದೆ ಎಂದು ಮಾಹಿತಿ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಸಮರ ವಿಚಾರದ ಕುರಿತು ಮಾತನಾಡಿದ ಅವರು, ಹಲವು ಪ್ರಕರಣಗಳ ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಗಂಗಾಕಲ್ಯಾಣ ಯೋಜನೆ ಅಕ್ರಮದಲ್ಲಿ ೪೩೧ ಕೋಟಿ ಅವ್ಯವಹಾರದ ಆರೋಪ ಇದೆ. ಕೆಕೆಆರ್ ಡಿಬಿ ಅನುದಾನದಲ್ಲಿ ಖಾಸಗಿ ಪ್ರವಾಸ ಮಾಡಿದ್ದಾರೆ. ಖಾಸಗಿ ಪ್ರವಾಸ ಕೈಗೊಂಡವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದೇವೆ ಎಂದು ಹೇಳಿದರು.

More News