ಬೆಂಗಳೂರು: ಭಜರಂಗದಳ ಬ್ಯಾನ್.. ಕಾಂಗ್ರೆಸ್ ನ ಹೀಗೊಂದು ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದನ್ನೇ ಏನ್ಕ್ಯಾಶ್ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೈ ಭಜರಂಗಬಲಿ ಎಂದು ಹನುಮಂತನ ಜಪ ಮಾಡಲು ಶುರುಮಾಡಿದ್ದರು. ಇದರಿಂದ ಕಂಗಾಲಾದ ಕೈ ನಾಯಕರೇ ಇಲ್ಲ ಭಜರಂಗದಳ ಬ್ಯಾನ್ ಪರ ವಹಿಸೋಲ್ಲ ಎಂದು ಹೇಳಿ, ಸ್ವ ಪಕ್ಷದಲ್ಲೇ ಪರ ವಿರೋಧ ಚರ್ಚೆ ಶುರುವಿಟ್ಟಿತ್ತು.
ಇದೀಗ ಭಜರಂಗದಳ ನಿಷೇದ ವಿಚಾರದ ಕುರಿತು ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ನಮ್ಮ ಪ್ರಣಾಳಿಕೆಯನ್ನ ಸರಿಯಾಗಿ ನೋಡಬೇಕು ಎಂದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಭಜರಂಗದಳ ಬ್ಯಾನ್ ಬಗ್ಗೆ ನಿರ್ಧಾರ ಮಾಡಿದ್ರಲ್ಲಾ.. ಏನ್ ಆಯ್ತು..? ಯಾವಾಗಿನಿಂದ ಕ್ರಮ ಕೈಗೊಳ್ತೀರಿ ಎಂಬ ಪ್ರಶ್ನೆ ಗೆ ವಿಧಾನಸೌಧದಲ್ಲಿ ಮಾತನಾಡಿದ ಡಾ. ಜಿ ಪರಮೇಶ್ವರ್ ಅವರು, ನಮ್ಮ ಪ್ರಣಾಳಿಕೆಯಲ್ಲಿ ಸರಿಯಾಗಿ ನೋಡಬೇಕು. ಯಾರು ಸಮಾಜದ ಶಾಂತಿಯನ್ನ ಕದಡುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ತಿವಿ ಅಂತ ಹೇಳಿದ್ದೇವೆ. ಅವರು ಮಾಡೋದಿಲ್ಲಾ ಅಂದ ಮೇಲೆ ಅವರಿಗೆ ಯಾಕೆ ವರಿ.. ಕಾನೂನು ಬ್ರೇಕ್ ಮಾಡೋಲ್ಲಾ ಅಂದ್ರೆ ಯಾಕೆ ಭಯ ಅದು ಅವರಿಗೆ ಅರ್ಥ ಆದ್ರೆ ಸಾಕು ಎಂದರು.

ಮುಂದುವರೆದು ಮಾತನಾಡಿದ ಅವರು, ನಮ್ಮ ಸಂಪ್ರದಾಯದಂತೆ ಕಚೇರಿ ಪೂಜೆ ಮಾಡಿ, ಪ್ರವೇಶ ಮಾಡಿದ್ದೇನೆ. ಪರಿಶುದ್ಧ ಆಡಳಿತ ನೀಡಬೇಕಿದೆ. ನಾವು ಚುನಾವಣೆ ಸಂದರ್ಭದಲ್ಲಿ ಒಳ್ಳೆಯ ಆಡಳಿತ ನೀಡುವುದಾಗಿ ಹೇಳಿದ್ದೇವೆ.ಇಡೀ ಸಂಪುಟ ಆ ರೀತಿ ನಡೆಯ ಬೇಕಿದೆ. ಜನರ ನಿರೀಕ್ಷೆಯಂತೆ ಆಡಳಿತ ನೀಡಬೇಕು ಎಂದು ಸಿಎಂ ಹೇಳಿದ್ದಾರೆ.ಗೃಹ ಇಲಾಖೆ ಉತ್ತಮ ಇಲಾಖೆ.ಲಾಠಿ ಏಟು, ಗುಂಡು ಹಾರಿಸುವುದು ಎಲ್ಲವೂ ಇಲಾಖೆಯಲ್ಲಿ ಇದೆ. ಶಾಂತಿ ಕದಡುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ನಾಟಕವನ್ನ ಕುವೆಂಪುರವರ ಮಾತಿನ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೇವೆ.
ಯಾವುದೇ ರೀತಿಯ ಮಾರಲ್ ಪೋಲೀಸ್, ಕಮ್ಯಾನಲ್ ಆಕ್ಟೀವಿಟೀಸ್ ಗೆ ಅವಕಾಶ ಇಲ್ಲ ಎಂದರು.
ಇನ್ನು ಪಿಎಸ್ ಐ ಪರೀಕ್ಷೆ ವಿಚಾರ ಕುರಿತು ಮಾತನಾಡಿದ ಅವರು, ಈಗ ಹೈಕೋರ್ಟ್ ನಲ್ಲಿ ಇದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯಲ್ಲ ಎಂದು ಮಾಹಿತಿ ನೀಡಿದರು.
ಪ್ರತಿಯೊಂದನ್ನ ಚರ್ಚೆ ಮಾಡಿ ಪ್ರಣಾಳಿಕೆ ಮಾಡಿದ್ದೇವೆ. ಜನರನ್ನ ಶಕ್ತಿಯುತವಾಗಿ ಮಾಡಬೇಕು ಎಂದು ಪ್ರಣಾಳಿಕೆ ಮಾಡಿದ್ದೇವೆ. 5 ಗ್ಯಾರೆಂಟಿ ಗಳನ್ನ ಅನುಷ್ಠಾನ ಮಾಡ್ತೇವೆ
ನಾಳೆವರೆಗೂ ಕಾಯಿರಿ. ಗೈಡ್ ಲೈನ್ಸ್ ಇಲಾಖೆಯವರು ಮಾಡ್ತಾರೆ ಎಂದು ತಿಳಿಸಿದರು.




