G. Parameshwar: ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್ ಸಿಗುತ್ತೆ, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ, ಯಾವುದು ಬೇಕೋ ತೀರ್ಮಾನ ಮಾಡಿ! ಜಿ ಪರಮೇಶ್ವರ್

ಬೆಂಗಳೂರು: ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ,‌ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್ ಸಿಗುತ್ತದೆ, ಒದೆನೂ ಸಿಗುತ್ತದೆ, ಮುಂದುವರಿದು ಗುಂಡು ಹಾರಿಸೋದು ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ! ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಲಾಟಿ ಓಟು ತಿನ್ನಬೇಕೋ? ಗುಂಡು ಹಾರಿಸಿಕೊಳ್ಳಬೇಕೋ ಅಥವಾ ಶಾಂತಿಯಿಂದ ರಾಜ್ಯ ನಡೆಸಬೇಕೋ ಎಂದು ಜನರೇ ತೀರ್ಮಾನ ಮಾಡಲಿ ಎಂದರು.

ನಮ್ಮ ಪ್ರಣಾಳಿಕೆಯಲ್ಲಿ ಯಾರು ಶಾಂತಿ ಕದಡುತ್ತಾರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ. ಅವರು ಯಾರು ಅದನ್ನು ಮಾಡಲ್ಲ ಎಂದರೆ ಭಯ ಪಡುವ ಅಗತ್ಯ ಇಲ್ಲ, ಮಾಡುತ್ತೇವೆ ಅಂದರೆ ಅವರಿಗೆ ಭಯ ಆಗುತ್ತದೆ ಎಂದರು.

ನಾಗರೀಕ ಸಮುದಾಯ ಹಾಗೂ ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ ನಮ್ಮದು ಕುವೆಂಪು ನಾಡು,‌ಸರ್ವಜನಾಂಗದ ಶಾಂತಿಯ ತೋಟ ಮಾಡುತ್ತೇವೆ. ಜನರು ಪಕ್ಷಪಾತವಾಗಿ, ಜಾತ್ಯಾತೀತವಾಗಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಇನ್ನು ನೈತಿಕ ಪೊಲೀಸ್ ಗಿರಿ ಹಾಗೂ ‌ಮತೀಯ ಘಟನೆಗಳನ್ನು ಸಹಿಸುವುದಿಲ್ಲ. ಅದಕ್ಕೆ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕೈಗೊಳ್ಳುತ್ತೇವೆ ಎಂದರು.

ಇನ್ನು ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಚರ್ಚೆ ಮಾಡಿದ್ದೇನೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾರು ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲ್ಲ ಎಂದರು.

ಇನ್ನು ಬಜರಂಗದಳ ಬ್ಯಾನ್ ವಿಚಾರವಾಗಿ, ಬಜರಂಗದಳ ಬ್ಯಾನ್ ಮಾಡುವ ಸಂದರ್ಭ ಬರಲಾರದು, ಬಂದರೆ ಮಾಡ್ತೀವಿ ಎಂದು ಹೇಳಿದರು.

More News