I didn't get cancer
ಬೆಂಗಳೂರು: ಸ್ಟಾರ್ ಅನಿಸಿಕೊಂಡ ಮಂದಿ ಮಾತಾಡೋದೆಲ್ಲಾ ಸುದ್ದಿ ಆಗುತ್ತೆ. ಅದ್ರಲ್ಲೂ ಒಮ್ಮೊಮ್ಮೆ ಮಾತಾಡೋದು ಒಂದು, ಸುದ್ದಿ ಆಗೋದು ಮತ್ತೊಂದು ಆದ ಘಟನೆಯೂ ಇದೆ. ಇದೇನು ಹೊಸದಲ್ಲ.. ನಮ್ಮಲ್ಲೇ ವೇಗವಾಗಿ ಸುದ್ದಿ ಹಾಕ್ಬೇಕು ಎಂಬ ಭರಾಟೆಯಲ್ಲಿ ಬದುಕಿದ್ದವರೂ ಸಹ ಎಷ್ಟೋ ಬಾರಿ ಸುದ್ದಿ ಗಳಲ್ಲಿ ಸತ್ತ ಉದಾಹರಣೆ ಇದೆ. ಇದೀಗ ತೆಲುಗು ನಟ ಚಿರಂಜೀವಿ ಹೇಳಿಕೆಯೊಂದನ್ನ ನೀಡಿ, ನಾನು ಹೇಳಿದ್ದು ಹಾಗಲ್ಲ ಎಂದು ಮರು ಹೇಳಿಕೆ ಕೊಟ್ಟು, ಸ್ಪಷ್ಟನೆ ನೀಡುವ ಪರಿಸ್ಥಿತಿ ಎದುರಾಯ್ತು..
https://twitter.com/KChiruTweets/status/1664988508883406848?s=20
“ನಟ ಚಿರಂಜೀವಿ ಗೆ ಕ್ಯಾನ್ಸರ್”! ಹೀಗೊಂದು ವಿಷಯ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹರಿದಾಡಿದವು. ಸುದ್ದಿ ಮಾಧ್ಯಮಗಳಲ್ಲೆಲ್ಲಾ ಭಾರೀ ಸದ್ದು ಮಾಡಿದ ಬೆನ್ನಲ್ಲೇ ನಟ ಚಿರಂಜೀವಿ ಸ್ಪಷ್ಟನೆ ನೀಡಿದ್ದಾರೆ.
ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿಕೊಂಡಿತ್ತು. ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು ಎಂದಷ್ಟೇ ನಾನು ಹೇಳಿದ್ದು ಎಂದು ಸ್ಪಷ್ಟನೆ ನೀಡಿದರು.

ತಮ್ಮ ಆರೋಗ್ಯದ ಬಗ್ಗೆ ಭಿತ್ತರವಾದ ಸುದ್ದಿ ವಿರುದ್ಧ ಅಸಮಧಾನ ಗೊಂಡು ಸುದೀರ್ಘ ಟ್ವೀಟ್ ಮಾಡಿದ ನಟ ಚಿರಂಜೀವಿ, ಕ್ಯಾನ್ಸರ್ ಸೆಂಟರ್ ಉದ್ಘಾಟನೆ ವೇಳೆ ಕ್ಯಾನ್ಸರ್ ಜಾಗೃತಿ ನೀಡಿದ್ದೆ. ಆಗ ನನ್ನ ಹೇಳಿಕೆ ಏನಾಗಿತ್ತು ಅಂದ್ರೆ, ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದ್ರೆ ಕ್ಯಾನ್ಸರ್ ತಡೆಗಟ್ಟಬಹುದು. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿಕೊಂಡಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು. ಆದರೆ ನನ್ನ ಮಾತನ್ನು ಕೆಲವು ಮಾಧ್ಯಮ ಸಂಸ್ಥೆಗಳು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನನಗೆ ಕ್ಯಾನ್ಸರ್ ಆಗಿದೆ ಮತ್ತು ಚಿಕಿತ್ಸೆಯಿಂದ ಬದುಕಿದೆ ಅಂತ ಸುದ್ದಿ ಮಾಡಿದ್ದಾರೆ. ಇದರಿಂದ ಅನಗತ್ಯ ಗೊಂದಲ ಶುರುವಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ. ಇದರಿಂದ ಅನೇಕರಿಗೆ ಭಯ ಮತ್ತು ನೋವು ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.