ಜೂನ್ 04, ಪುರಿ: ಒಡಿಶಾ ರಾಜ್ಯದ ಪುರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜಾನಪದ ಮೇಳಕ್ಕೆ ಕರ್ನಾಟಕ ರಾಜ್ಯ ತಂಡ ತೆರಳಿತ್ತು.
ಬಾನಸೋರದಲ್ಲಿ ನಡೆದಿರುವ ರೈಲು ದುರಂತದಿಂದ ರಾಜ್ಯಕ್ಕೆ ಮರಳಿ ಬರಲು ಪರಿತಪಿಸುತ್ತಿರುವ ಸಮಯದಲ್ಲಿ ರಾಜ್ಯದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು 17 ಜನರನ್ನೊಳಗೊಂಡ ರಾಜ್ಯದ ಕಲಾ ತಂಡಕ್ಕೆ ನೆರವಾಗಿದ್ದಾರೆ.

ಸಂಪೂರ್ಣ ತಂಡಕ್ಕೆ ವಿಮಾನದ ಟಿಕೆಟ್ ವ್ಯವಸ್ಥೆಯನ್ನು ಮಾಡಿಸಿದ್ದು ಇಂದು ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.