Electricity Bill: ಜುಲೈ 1 ರಿಂದ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ವಿದ್ಯುತ್ ಫ್ರೀ ಎಂದು ಹೇಳಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್, ಬಾಡಿಗೆ ಮನೆ, ಸ್ವಂತ ಮನೆ ಸೇರಿದಂತೆ ಎಲ್ಲರಿಗೂ 200 ಯೂನಿಟ್ ಗೃಹಜ್ಯೋತಿ ಉಚಿತ ಎಂದ ಬೆನ್ನಲ್ಲೇ ಗ್ರಾಹಕರಿಗೆ ಇದೀಗ ವಿದ್ಯುತ್ ಶಾಕ್ ಎದುರಾಗಿದೆ.
ನಷ್ಟದ ಕಾರಣವನ್ನು ನೀಡಿ ಜುಲೈ 1 ರಿಂದಲೇ ವಿದ್ಯುತ್ ದರ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಲಾಗಿದೆ.

ಮೇ 12 ಕ್ಕೆ ದರ ಪರಿಷ್ಕರಣೆ ಮಾಡಿದ್ದ ಕೆಇಆರ್ ಸಿ
(ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)
ಪ್ರತಿ ಯೂನಿಟ್ ಗೂ 70 ರೂಪಾಯಿ ಹೆಚ್ಚಳ ಮಾಡಿತ್ತು. ನಷ್ಟದ ಕಾರಣವನ್ನು ನೀಡಿ ದರ ಏರಿಕೆ ಮಾಡಲಾಗಿದೆ. ಜುಲೈ 1 ರಿಂದ ಪರಿಷ್ಕೃತ ದರ ಜಾರಿ ಮಾಡೋದಾಗಿ ಕೆಇಆರ್ ಸಿ ಹೇಳಿಕೆ ನೀಡಿದೆ.

2023–24ನೇ ಸಾಲಿಗೆ ಒಟ್ಟು ₹62,133 ಕೋಟಿಗಳ ವಾರ್ಷಿಕ ಆದಾಯ ದೊರೆಯುವ ಪ್ರಸ್ತಾವವನ್ನು ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿದ್ದವು. ಈ ಮೊತ್ತದಲ್ಲಿ ₹8,951 ಕೋಟಿ ಆದಾಯ ಕೊರತೆ ಇತ್ತು. ಅಲ್ಲದೇ, ಆದಾಯದ ಕೊರತೆ ನೀಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ ₹1.39 (ಪ್ರತಿ ಯೂನಿಟ್‌ಗೆ ₹1.20ರಿಂದ ₹1.46) ಹೆಚ್ಚಿಸುವಂತೆ ಕೋರಿದ್ದವು. ಆದಾಯ ಕೊರತೆ ಎದುರಿಸುತ್ತಿರುವ ಎಸ್ಕಾಂಗಳ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದ ಕೆಇಆರ್‌ಸಿ, ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ವಿದ್ಯುತ್‌ ದರ ಹೆಚ್ಚಿಸಿದ್ದು, ಜುಲೈ 1 ರಿಂದಲೇ ಜಾರಿಗೆ ಬರಲಿದೆ.

More News

You cannot copy content of this page