BJP Protest: ತಮ್ಮ ಸರ್ಕಾರ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿ..!

ಬೆಂಗಳೂರು: ಕಾಂಗ್ರೆಸ್ ಭಾಗ್ಯಗಳಿಂದ ಗಲಿಬಿಲಿ ಗೊಂಡ ಬಿಜೆಪಿ
ತನ್ನ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ ವಿದ್ಯುತ್ ದರದ ವಿರುದ್ಧ ತಾನೇ ಪ್ರತಿಭಟನೆಗೆ ಇಳಿದಿದೆ..!

ಜೂನ್ ೧ ರಿಂದ ಜಾರಿಗೆ ಬರುವಂತೆ ಎಸ್ಕಾಂಗಳು ವಿದ್ಯುತ್ ಶುಲ್ಕ ಏರಿಸಿ ಹೇಳಿಕೆ ಬಿಡುಗಡೆ ಮಾಡಿದ ಹಿನ್ನಲೆ
ಇಂದು ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳ ಮತ್ತು ಹಾಲಿನ ದರ ಕಡಿತ ನೆಪದಲ್ಲಿ ಬಿಜೆಪಿ ಪ್ರತಿಭಟನೆಗಿಳಿದಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಹಲವೆಡೆ ಭಾರೀ ಪ್ರತಿಭಟನೆ ನಡೆಸುವ ಪ್ಲ್ಯಾನ್ ಮಾಡಿದೆ.

ಈ ಬಗ್ಗೆ ನಿನ್ನೆ ಅಷ್ಟೇ ಗೋಷ್ಠಿ ನಡೆಸಿ ನಾಜೂಕಾಗಿ ಮಾತನಾಡಿದ್ದ ಬಿಜೆಪಿ ನಾಯಕ ರವಿಕುಮಾರ್, ಜುಲೈನಿಂದ ಒಂದು ಯೂನಿಟ್‍ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್‍ಗೆ 56 ರೂ. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರ್ಕಾರ ಮಾಡಿದ್ದೇನು? ಸರ್ಕಾರ ಒಂದೆಡೆ ಉಚಿತ ಎನ್ನುತ್ತದೆ. ಅದೇ ರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ ಎಂದಿದ್ದರು.

ಆದರೆ ಅಸಲಿ ವಿಷಯವೇನು ಅಂದ್ರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ದರ ಹಚ್ಚಳ ಜಾರಿಯಾಗಿ ರಲಿಲ್ಲ. ಇದೀಗ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ಬಂದ ವಿದ್ಯುತ್ ದರ ಹೆಚ್ಚಳ ವಿರುದ್ಧ ಬಿಜೆಪಿ ತಾನೇ ಪ್ರತಿಭಟನೆ ಮಾಡಲು ಮುಂದಾಗಿದ್ದು, ಟೀಕೆಗಳು ವ್ಯಕ್ತವಾಗ್ತಿದೆ.

More News