Actress Bhoomika Vasishth: ಸ್ಟೇಟಸ್, ಗ್ಲ್ಯಾಮರಸ್ ಕಾಪಾಡಲು ಬಟ್ಟೆ ಬಿಚ್ಚಿ ಹಣ ಸಂಪಾದಿಸಲು ಪ್ರಾರಂಭಿಸಿದೆ: ನಟಿ ಭೂಮಿಕಾ ವಶಿಷ್ಟ್ ಅಳಲು

ಗ್ಲ್ಯಾಮರಸ್ ಆಗಿ ಕಾಣ್ಬೇಕು.. ಇನ್ನೂ.. ಹೆಚ್ಚು ಪ್ರಚಲಿತದಲ್ಲಿ ಇರಬೇಕು ಎಂದು ಆದಾಯ ಮೀರಿ ಸಾಲ ಮಾಡ್ದೆ. ಹಣದ ಅಗತ್ಯ ಹೆಚ್ಚಾಗಿ ಬಟ್ಟೆ ಬಿಚ್ಚಿ ಹಣ ಮಾಡಲು ಶುರುಮಾಡಿದೆ ಎಂದು ಕಿರುತೆರೆ, ರಿಯಾಲಿಟಿ ಶೋನ ಸ್ಪರ್ಧಿ ಭೂಮಿಕಾ ವಶಿಷ್ಟ್ ಶಾಕಿಂಗ್ ಹೇಳಿಕೆಯನ್ನ ನೀಡಿದ್ದಾರೆ.

ಬಹುಭಾಷ ನಟ ಸೋನುಸೂದ್ ಎಂಟಿವಿ ರೋಡೀಸ್‌ ನ ಹೊಸ ಸೀಸನ್ ಗೆ ಹೋಸ್ಟ್ ಆಗಿದ್ದಾರೆ. ಇದಕ್ಕೆ ಸ್ಪರ್ಧಿಯಾಗಿ ಭಾಗವಹಿಸಿದ್ದ ಧಾರವಾಹಿ ನಟಿ ಭೂಮಿಕಾ ವಶಿಷ್ಟ್ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಯಿಂದ ಹೊರ ಬರಲಾರದೆ ಹೇಗೆ ಮಾನಸಿಕವಾಗಿ ಖಿನ್ನರಾದರು ಎಂಬ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಎಂಟಿವಿ ರೋಡೀಸ್ ಟ್ರಯಲ್ ವೇಳೆ ಮಾತನಾಡಿದ ಭೂಮಿಕಾ, ಸ್ಪ್ಲಿಟ್ಸ್ ವಿಲ್ಲಾ ಶೋ ನಂತರ ನನ್ನ ಇಮೇಜ್ ಮತ್ತು ಗ್ಲಾಮರ್ ಉಳಿಸಿಕೊಳ್ಳಲು ಬಹಳ ಕಷ್ಟ ಪಟ್ಟೆ. ಸಾಲ ಮಾಡಿದ್ದೆ. ನನ್ನ ಆದಾಯ ಮೀರಿ ಸಾಲವೇ ಬೆಳೆದುಬಿಡ್ತು. ಹೇಗೆ ಮಾಡಿದ್ರೂ ನನ್ನ ಸಂಪಾದನೆಯಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಇದರಿಂದ ಹೇಗಾದ್ರು ಹೊರಬರ್ಬೇಕು ಎಂದು ನಿರ್ಧರಿಸಿದ ನಾನು ಮತ್ತೊಂದು ತಪ್ಪು ನಿರ್ಧಾರ ಮಾಡಿಬಿಟ್ಟೆ ಎಂದು ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಸಾಲ ತೀರಿಸುವುದಕ್ಕಾಗಿ ಬಟ್ಟೆ ಬಿಚ್ಚುವ ವಿಡಿಯೋವನ್ನು ಆಪ್‌ವೊಂದರಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದೆ. ನಗ್ನ ಫೋಟೋ ಪೋಸ್ಟ್ ಮಾಡಿ ಹಣ ಗಳಿಸಲು ಮುಂದಾಗಿದ್ದೆ. ಆದರೆ ನನ್ನ ದುರದೃಷ್ಟಕರ ಆ ವಿಡಿಯೋ ಆನ್‌ಲೈನ್‌ನಲ್ಲಿ ಲೀಕ್ ಆಗಿಬಿಡ್ತು. ಈ ಕಾರಣಕ್ಕೆ ಹಲವು ದಿನಗಳ ಕಾಲ ಖಿನ್ನತೆಗೂ ಒಳಗಾದೆ ಎಂದು ಹೇಳಿಕೊಂಡಿದ್ದಾರೆ.

More News