ಅರ್ಜುನ್ ಸರ್ಜಾ ನನ್ನೊಂದಿಗೆ ಮಿಸ್ ಬಿಹೇವ್ ಮಾಡಿದ್ರು ಎಂದು ಠಾಣೆ ಮೆಟ್ಟಿಲೇರಿದ ನಟಿ ಶೃತಿ ಹರಿಹರನ್ ಗೆ ಹಿನ್ನಡೆಯಾಗಿದೆ. ಮೂರು ವರ್ಷ ಕಳೆದರೂ ಅರ್ಜುನ್ ಸರ್ಜಾ ವಿರುದ್ಧ ಯಾವುದೇ ಸಾಕ್ಷಿ ಸಿಗದ ಹಿನ್ನಲೆ ನಟಿ ಶ್ರುತಿ ಹರಿಹರನ್ಗೆ ನೋಟೀಸ್ ಜಾರಿ ಮಾಡಲಾಗಿದೆ.
ಭಾರೀ ಸಂಚಲನ ಸೃಷ್ಟಿ ಮಾಡಿದ್ದ ಮೀಟೂ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ʻವಿಸ್ಮಯʼ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು. ನಟನೆ ಹೆಸರಿನಲ್ಲಿ ನನ್ನೊಂದಿಗೆ ಮಿಸ್ ಬಿಹೇವ್ ಮಾಡಿದ್ರು ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್ 2018 ರಲ್ಲಿ ದೂರು ದಾಖಲಿಸಿದ್ದರು.

ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದ ನಟಿ ಶೃತಿ ಹರಿಹರನ್, ಅರ್ಜುನ್ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ 354, 509 ಲೈಂಗಿಕ ಕಿರುಕುಳ, ಐಪಿಸಿ 354ಎ ಹಾಗೂ ಜೀವ ಬೆದರಿಕೆ ಐಪಿಸಿ 506 ಆರೋಪದ ಅಡಿ ಕೇಸ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಾಗಿ ಯುಬಿ ಸಿಟಿ, ದೇವನಹಳ್ಳಿ ಹಾಗೂ ಇತರೆ ಜಾಗದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು.

ಆದರೆ ನಟಿ ದೂರು ಪಡೆದು ಪರಿಶೀಲನೆಗೆ ಇಳಿದ ಪೊಲೀಸರಿಗೆ ಯಾವುದೇ ದಾಖಲೆ ಸಿಕ್ಕಿಲ್ಲ. ಹೀಗಾಗಿ ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ. ಇತ್ತ CRPC ನಿಯಮಾನುಸಾರ ಫಾರ್ಮ್ ನಂಬರ್ 159ರ ಅಡಿ ನಟಿ ಶ್ರುತಿ ಹರಿಹರನ್ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.