I AM IN DEPRESSION ANUSUYA: ವಿಜಯ್ ದೇವರಕೊಂಡ ಮಾಡಿಸಿದ ಟ್ರೋಲ್ ನಿಂದ ನಾನು ಡಿಪ್ರೆಶನ್ ಗೆ ಜಾರಿದ್ದೆ: ನಟಿ ಅನಸೂಯ ಆರೋಪ

ವಿಜಯ್ ದೇವರಕೊಂಡ ಪಬ್ಲಿಸಿಟಿ ನೋಡಿಕೊಳ್ಳುವ ವ್ಯಕ್ತಿ ಹಣ ಕೊಟ್ಟ ನನ್ನನ್ನು ಟ್ರೋಲ್ ಮಾಡುವಂತೆ ಹೇಳಿದ್ದಾರೆ ಎಂದು ನಟಿ ಅನಸೂಯ ಭಾರದ್ವಾಜ್ ದೂರಿದ್ದಾರೆ.
ನಟ ವಿಜಯ್ ದೇವರಕೊಂಡ ಮತ್ತು ಅನಸೂಯ ಭಾರದ್ವಾಜ್ ನಡುವಿನ ಮುಸುಕಿನ ಗುದ್ದಾಟ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿ, ಸುದ್ದಿ ಆಗ್ತಲೇ ಇರುತ್ತದೆ. ಇದೀಗ ನಟನ ವಿರುದ್ಧ ಮತ್ತೊಮ್ಮೆ ಗರಂ ಆಗಿರುವ ನಟಿ ಅನಸೂಯ, ವಿಜಯ್ ಕಡೆಯವರಿಂದಲೇ ನಾನು ಆಗಾಗ ಟ್ರೋಲ್ ಆಗುತ್ತಿದ್ದೇನೆ. ಆತನೇ ಹಣವನ್ನ ಕೊಟ್ಟು ಟ್ರೋಲ್ ಮಾಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಖಾಸಗಿ ಚಾನಲ್ ಗೆ ಈ ಬಗ್ಗೆ ಮಾತನಾಡಿರುವ ನಟಿ ಅನಸೂಯ, ವಿಜಯ್ ಪಬ್ಲಿಸಿಟಿ ನೋಡಿಕೊಳ್ಳುವ ವ್ಯಕ್ತಿ ಹಣ ನೀಡಿ ನನ್ನನ್ನು ಟ್ರೋಲ್ ಮಾಡಿಸುತ್ತಿದ್ದಾನೆ ಎಂಬ ವಿಚಾರ ನನ್ನ ಕಿವಿಗೆ ಬಿದ್ದಿದೆ. ಅವ್ನ ಜೊತೆಗಾರ ಈ ರೀತಿ ಮಾಡಿದ್ದಾನೆ ಅಂದ್ರೆ ವಿಜಯ್ ದೇವರಕೊಂಡ ಗಮನದಲ್ಲಿ ಇರಲ್ವಾ? ನಟನಿಗೆ ಗೊತ್ತಿಲ್ಲದ ಹಾಗೆ ಆತ ಹಣ ಬಳಸಿ ಇಂತ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗರಂ ಆಗಿದ್ದಾರೆ.
ತಮ್ಮ ಮತ್ತು ವಿಜಯ್ ದೇವರಕೊಂಡ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವೇನು ಎಂಬ ಬಗ್ಗೆ ಮಾತನಾಡಿದ ನಟಿ ಅನಸೂಯಾ, ನಾನು ಆತ ಒಳ್ಳೆಯ ಸ್ನೇಹಿತರಾಗಿದ್ದೆವು. 2017 ರಲ್ಲಿ ಅರ್ಜುನ್ ರೆಡ್ಡಿ ಚಿತ್ರ ರಿಲೀಸ್ ವೇಳೆ ಕೆಟ್ಟ ಪದಕ್ಕೆ ಬೀಪ್ ಸೌಡ್ ಹಾಕಿದ್ದರು. ಸ್ಟೇಜ್ ಮೇಲೆ ಮಾತನಾಡಲು ಹೋದ ನಟ ಆ ಕೆಟ್ಟ ದವನ್ನ ಜನರಿಗೆ ಹೇಳಲು ಪ್ರಾರಂಭಿಸಿದ್ದರು. ನಾನೊಂದು ಮಗುವಿನ ತಾಯಿಯಾಗಿ ಇಂಥ ಪದವನ್ನ ಕೇಳೋ ತಾಳ್ಮೆ ಇರಲಿಲ್ಲ. ಸಿನಿಮಾ ಕಥೆಗೆ ಪಾತ್ರ ಈ ರೀತಿ ಇರಬೇಕು ಎಂದು ಇತ್ತು ಪಾತ್ರವಾಗಿ ಅದು ಓಕೆ ಆದರೆ ರಿಯಲ್ ಲೈಫ್‌ನಲ್ಲಿ ವೀಕ್ಷಕರಿಗೆ ಯಾಕೆ ತಪ್ಪು ದಾರಿ ತೋರಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಬೇಸರಗೊಂಡು ವಿಜಯ್ ಜೊತೆ ನೇರವಾಗಿ ಮಾತನಾಡಿದ್ದೆ. ಈ ರೀತಿ ಪದ ಬಳಸದಿರಲು. ಅಭಿಮಾನಿಗಳು ನಮ್ಮ ಸಿನಿಮಾ ನೋಡಿ ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಸರಿ ಮಾಡಬೇಕು. ಆ ಜವಾಬ್ದಾರಿ ಎಲ್ಲರಿಗೂ ಇರಬೇಕು ಎಂದಿದ್ದೆ. ಅಲ್ಲಿಂದ ನನ್ನ ವಿರುದ್ಧ ಟೀಕೆ ಪ್ರಾರಂಭವಾಯ್ತು ನೋಡಿ. ಎಷ್ಟರ ಮಟ್ಟಿಗೆ ಟೀಕೆ ಮಾಡಲು ಪ್ರಾರಂಭಿಸಿದರು ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಹೇಳಿಕೆಗಳಿಗೆ ಡಿಪ್ರೆಶನ್ ಗೂ ಹೋಗಿಬಿಟ್ಟೆ. ಆದ್ರೂ ಗಟ್ಟಿಯಾಗಿ ನಿಂತು ಎಲ್ಲವನ್ನೂ ಎದುರಿಸಿದೆ ಬೇಸರ ವ್ಯಕ್ತಪಡಿಸಿದ್ದಾರೆ.

More News