GRAHA LAKSHMAI SCHEEME: ಗೃಹಲಕ್ಷ್ಮೀ ಯೋಜನೆ: ಮಕ್ಕಳು ತೆರಿಗೆ ಪಾವತಿಸಿದರೆ ಯೋಜನೆ ಲಾಭ ಪಡೆಯಬಹುದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಗೃಹಲಕ್ಷ್ಮಿ ಫಾರ್ಮ್ ಎಲ್ಲೆಡೆ ಓಡಾಡ್ತಿರೋದು ಅಸಲಿ, ಅದರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ಪಾಸ್ ಬುಕ್‌ ಕಲಂ ಅನ್ನು ಸೇರಿಸಲಾಗಿದೆ, ಹಾಗೆಯೇ ಸಂದೇಶ ತಪ್ಪಾಗಿ ಹೋಗಬಾರದು ಎಂಬ ಉದ್ದೇಶದಿಂದ ಜಾತಿ ಬದಲು ವರ್ಗ ಎಂದು ನಮೂದಿಸಲಾಗಿದೆ ಎಂದು ವಿವರಿಸಿದರು.

ಗಂಡ ತೆರಿಗೆ ಕಟ್ಟಿದರೆ ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ, ಆದರೆ ಮಗ ತೆರಿಗೆ ಕಟ್ಟೋದು ಇದಕ್ಕೆ ಅನ್ವಯವಾಗುವುದಿಲ್ಲ, 90% ಬಿಪಿಎಲ್ ಕಾರ್ಡಲ್ಲಿ ಮಹಿಳೆಯರೇ ಪ್ರಮುಖರಾಗಿದ್ದಾರೆ. ಯಾರಿಗೆಲ್ಲಾ ಫಲ ಸಿಗಬೇಕು ಅವರಿಗೆ ಖಂಡಿತವಾಗಿಯೂ ಸಿಗಲಿದೆ ಎಂದು ಹೇಳಿದರು.
ಆಗಸ್ಟ್ 17 ಅಥವಾ 18ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಗೃಹಲಕ್ಷ್ಮೀ ಯೋಜನೆ ಅಂದಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ವಿವರಿಸಿದರು.

More News