Channaraj Hattiholi Darbar: ಸಚಿವರ ಕಚೇರಿಯಲ್ಲಿ ಸೋದರನ ದರ್ಬಾರ್

ಬೆಂಗಳೂರು : ಸಚಿವರಾಗಿ ಅಧಿಕಾರ ಪಡೆದು ಇನ್ನೂ ಒಂದು ತಿಂಗಳು ಕಳೆದಿಲ್ಲ. ಆವಾಗ್ಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಚೇರಿಯಲ್ಲಿ ಅವರ ಸಹೋದರ ಚನ್ನರಾಜ್ ಹಟ್ಟಿಹೋಳಿ ಅಂಧಾ ದರ್ಬಾರ್ ಆರಂಭವಾಗಿದೆ.
ಸಚಿವರ ಕೊಠಡಿಯಲ್ಲಿ ಅಧಿಕಾರಿಗಳೊಂದಿಗೆ ಸಹೋದರ ಚೆನ್ನರಾಜ್ ಹಟ್ಟಿಹೊಳಿ ದರ್ಬಾರ್ ಮಾಡುತ್ತಿರುವ ದೃಶ್ಯ ಇದೀಗ ಸೆರೆಯಾಗಿದೆ. ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ತಾನೇ ದರ್ಬಾರ್ ಮಾಡುತ್ತಿರುವ ಚನ್ನರಾಜ್ ಹಟ್ಟಿಹೊಳಿ, ತಾನೇ ಸಚಿವರು ಎಂಬಂತೆ ಫೋಸು ನೀಡುತ್ತಿದ್ದರು.
ಈ ದೃಷ್ಯಗಳ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮಗಳ ಮೇಲೂ ಚನ್ನರಾಜ್ ಹಟ್ಟಿಹೊಳಿ ದರ್ಪ ತೋರಿಸಿದ್ದಾರೆ. ಗ್ಯಾರಂಟಿ ಸ್ಕೀಂಗಳ ಬಗ್ಗೆ ಇದ್ದ ಅನುಮಾನಗಳನ್ನು ಬಗೆಹರಿಸಲು ಸಚಿವರ ಕಚೇರಿಗೆ ಮಾಧ್ಯಮದವರು ತೆರಳಿದ್ದರು. ಸಚಿವರು ಸುಮ್ಮನಿದ್ದರೂ ಎಂಲ್ ಸಿ ಚನ್ನರಾಜ್ ದರ್ಪ ತೋರಿಸಿದ್ದಾರೆ.

ಹೊರಗೆ ನಡೆಯಿರಿ ಏನೂ ಉತ್ತರ ಕೊಡಲ್ಲ ಎಂದು ದರ್ಪ ಮೆರೆದ ಚನ್ನರಾಜ್, ಜನರ ಸಮಸ್ಯೆಗಳ ಪತ್ರಗಳಿಗೂ ಸಚಿವರ ಕೊಠಡಿಯಲ್ಲಿ ಕುಳಿತು ತಾವೇ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸಹೋದರನ ವರ್ತನೆಗೆ ತಾವೇ ಕ್ಷಮೆ ಕೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದ್ದರು.
ಆದರೆ, ಆಡಳಿತರೂಢ ವಿಧಾನಸೌಧದಲ್ಲಿ ಸಚಿವರ ಕೊಠಡಿಯಲ್ಲಿ ಸಹೋದರ ನಡೆಸುತ್ತಿರುವ ದರ್ಬಾರ್ ಗೆ ಯಾರು ಹೊಣೆ ಎಂದು ಅಲ್ಲಿದ್ದವರು ಪ್ರಶ್ನಿಸುತ್ತಿದ್ದಾರೆ. ಇದೇನಾ ಸ್ವಚ್ಚ ಆಡಳಿತ ಎಂದು ಪ್ರಶ್ನಿಸುತ್ತಿದ್ದಾರೆ.

More News