Minister KN Rajanna Injured: ಪಟಾಕಿ ಸಿಡಿದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಕಣ್ಣಿಗೆ ಗಾಯ : ಆಸ್ಪತ್ರೆ ಯಲ್ಲಿ ಚಿಕಿತ್ಸೆ

ಕುಣಿಗಲ್ : ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಕಣ್ಣಿಗೆ ಪಟಾಕಿ ಸಿಡಿದು ಗಾಯಗೊಂಡ ಘಟನೆ ಪಟ್ಟದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಹಾಸನ ಜಿಲ್ಲಾ ಉಸ್ತುವಾರ ಸಚಿವರಾಗಿರುವ ಕೆ.ಎನ್ ಕೆ.ಎನ್ ರಾಜಣ್ಣ ಅವರು ಭಾನುವಾರ ಶಕ್ತಿ ಯೋಜನೆಗೆ ಚಾಲನೆ ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು,
ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಪುಪ್ಪ ಮಾಲೆ‌ಹಾಕಿ ಅಭಿನಂದಿಸಿದರು, ಬಳಿಕ ಸಮೀಪದಲ್ಲೇ ಪಟಾಕಿಯನ್ನು ಹಚ್ಚಿ ಸಿಡಿಸಿದರು, ಈ‌ವೇಳೆ ರಾಜಣ್ಣ ದರಿಸಿದ ಕನ್ನಡಕ ತೆಗೆಯುವುದು ಒಂದು ವೇಳೆಯಾಗಿತ್ತು ಪಟಾಕಿ ಸಿಡಿಯುವುದು ಒಂದೇ ವೇಳೆಯಾಗಿತ್ತು ಈ ವೇಳೆ ಪಟಾಕಿಯ ಕಿಡಿ ನೇರವಾಗಿ ಕಣ್ಣಿಗೆ ಬಲ ಕಣ್ಣಿಗೆ ಬಂದು ಸಿಡಿಯಿತು. ತಕ್ಷದ ಇಲ್ಲಿನ ಎಂ.ಎಂ ಖಾಸಗಿ ಆಸ್ಪತ್ರೆ ಗೆ ತೆರಳಿ ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು ಬಳಿಕ ಹಾಸನಕ್ಕೆ ತೆರಳಿದರು

More News