TOUGHEST TRIALS OF MY LIFE: ನನ್ನ ಜೀವನದ ಅತ್ಯಂತ ಕಠಿಣ ವಿಚಾರಣೆ : ಸೋಶಿಷಿಯಲ್ ಮೀಡಿಯಾಗೆ ಗುಡೈ ಬೈ ಹೇಳಿದ ಕಾಜೋಲ್

ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಕಾಜೋಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕಾಜಲ್, ಕೇವಲ ಒಂಂದು ಪೋಸ್ಟ್ ಅನ್ನು ಬಿಟ್ಟು ಉಳಿದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡುವ ಮೂಲಕ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.

ಬಾಲಿವುಡ್ ಬೆಡಗಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ವಿರಾಮ ಘೋಷಿಸಿದ್ದಾರೆಯೇ, ಅಥವಾ ನಿಜ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಇನ್ ಸ್ಟ್ರಾಗ್ರಾಮ್ ವೊಂದರಲ್ಲಿ 14.4 ಮಿಲಿಯನ್ ಫಾಲೋವರ್ ಹೊಂದಿರುವ ಕಾಜೋಲ್ ಅವರ ಪೋಸ್ಟ್ ನ ಅರ್ಥ ಮಾತ್ರ ತಿಳಿದುಬಂದಿಲ್ಲ.

ನನ್ನ ಜೀವನ ಕಠಿಣ ವಿಚಾರಣೆಗಳನ್ನು ಪ್ರಯೋಗಗಳಲ್ಲಿ ಒಂದನ್ನು ಎದುರಿಸುತ್ತಿದ್ದೇನೆ ಎಂದು ನಿಗೂಢವಾಗಿ ಹೇಳಿದ್ದಾರೆ. ಸಮಾಜಿಕ ಮಾಧ್ಯಮಗಳಿಂದಲೇ ತೊಂದರೆ ಅನುಭವಿಸುತ್ತಿದ್ದಾರಾ, ಹಾಗಾದರೆ ಆ ತೊಂದರೆ ನೀಡುತ್ತಿರುವವರು ಯಾರು ಎಂಬ ಪ್ರಶ್ನೆಗಳ ಸುರಿಮಳೆಯನ್ನು ಅಭಿಮಾನಿಗಳು ಕೇಳಿದ್ದಾರೆ.

ನಟ ಅಜಯ್ ದೇವಗನ್ ಅವರನ್ನು ಮದುವೆಯಾಗಿದ್ದ ಕಾಜೋಲ್, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಎಂತಹದ್ದೇ ಪರಿಸ್ಥಿತಿಯನ್ನು ಎದುರಿಸಲು ತಾವು ಸಮರ್ಥರಾಗಿದ್ದೀರಾ ಎಂದು ಅಭಿಮಾನಿಗಳು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದು ಅವರ ಮುಂದಿನ OTTಸರಣಿ ದಿ ಗುಡ್ ವೈಫ್ ನ ಪ್ರಚಾರದ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

#KAJOL #ACTRESSKAJOL #AJAYDEVAGAN #LIFE #TOGHESTTIME

More News