SOLOGAMY LADY FIRST WEDDING ANNIVERSARY: ತನ್ನನ್ನೇ ತಾನು ಮದುವೆಯಾಗಿದ್ದ ಯುವತಿಯ ಮೊದಲನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

ಗುಜರಾತ್ : ದೇಶದಲ್ಲೇ ಬಹಳ ಚರ್ಚೆಗೆ ಗ್ರಾಸವಾಗಿದ್ದ ತನ್ನನ್ನೇ ತಾನು ಮದುವೆಯಾಗುವ ಸೋಲೋಗಾಮಿ (SOLOGAMY) ಪದ್ಧತಿ. ಸ್ವಯಂ ವಿವಾಹವಾಗಿದ್ದ ಗುಜರಾತ್ ನ ವಡೋದರದ ಮಹಿಳೆ ಕ್ಷಮಾಬಿಂದು(24) ಇದೀಗ ತನ್ನ ಮದುವೆಯ ಮೊದಲನೇ ವರ್ಷದ ಸಂಭ್ರಮದಲ್ಲಿದ್ದಾರೆ.

HAPPY WEDDING ANNIVERSARY ಎಂದು ತಮಗೆ ತಾವೇ ಶುಭಾಶಯ ಕೋರುವ ಒಂದು ಪುಟ್ಟ ವಿಡಿಯೋವೊಂದನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದರೊಂದಿಗೆ ಕ್ಷಮಾ ಬಿಂದು ಏಕಾಂಗಿಯಾಗಿ ನಾನಾ ಸ್ಥಳಗಳಿಗೆ ಪ್ರವಾಸ ಕೊಂಡಿದ್ದರು. ಈ ಫೋಟೋ ಮತ್ತು ವಿಡಿಯೋವನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಜೂನ್ 9, 2022 ರಂದು ಕ್ಷಮಾ ಬಿಂದು ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸ್ವವಿವಾಹ ವಾಗಿದ್ದರು. ಅಲ್ಲದೆ ಅವರು ಒಂಟಿಯಾಗಿ ಗೋವಾಕ್ಕೆ ಮಧುಚಂದ್ರಕ್ಕೆ ತೆರಳಿದ್ದರು.

ಕ್ಷಮಾಬಿಂದು ತನ್ನನ್ನೇ ತಾನು ಮದುವೆಯಾದ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಒಂದು ವರ್ಷದ ಹಿಂದೆ ನಡೆದ ಇವರ ಮದುವೆಯನ್ನು ಸ್ಥಳೀಯ ರಾಜಕಾರಣಿಗಳು ಮತ್ತು ಕೆಲವೊಂದು ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿದ್ದವು.

ಇದರಿಂದ ದೇಶ, ವಿದೇಶದಲ್ಲಿ ಈ ತನ್ನನ್ನೇ ತಾನು ಮದುವೆಯಾಗುವ ಸುದ್ದಿಯಾಗಿತ್ತು. ಹಾಗೂ ಕ್ಷಮಾ ಬಿಂದು ಸಾಕಷ್ಟು ಪ್ಕಚಾರವನ್ನು ಗಿಟ್ಟಿಸಿಕೊಂಡಿದ್ದರು.

#KSHAMABINDHU #SOLOGAMYMARRIAGE #GUJARAT #VODODHARA #HAPPYWEDDINGANNIVERSARY #WISHES #SELFMARRIAGE

More News