TAMILNADU MINISTER ARREST BY ED: ಅಕ್ರಮ ಹಣ ವರ್ಗಾವಣೆ ಆರೋಪ: ತಮಿಳುನಾಡು ಇಂಧನ ಸಚಿವ ಬಂಧನ: ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ತಮಿಳುನಾಡು: ತಮಿಳುನಾಡಿನಲ್ಲಿ ಇನ್ನೇನು ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹೊಸ್ತಿಲಲ್ಲೇ ತಮಿಳುನಾಡಿನಲ್ಲಿ ಇಂದು ಹೈ ಡ್ರಾಮಾ ನಡೆದಿದೆ. ಅಕ್ರಮ ಹಣ ವರ್ಗಾವಣೆ ಕಾಯ್ಡೆಯಡಿಯಲ್ಲಿ ತಮಿಳುನಾಡು ಸರ್ಕಾರದ ಇಂಧನ ಸಚಿವ ಸೆಂಥಿಲ್ ಬಾಲಾಜಿಯವರನ್ನು ಇಂದು ಜಾರಿ ನಿರ್ದೇಶನಾಲಯ ನಸುಕಿನ ವೇಳೆ ಬಂಧಿಸಿದೆ.

ಮಂಗಳವಾರದಂದು ನಡೆದ ಸುಧೀರ್ಘ ವಿಚಾರಣೆಯ ನಂತರ ಇಂದು ಬೆಳಗ್ಗೆ ಸೆಂಥಿಲ್ ಬಾಲಾಜಿಯವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಹಠಾತ್ತನೇ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಚನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆಯಿಂದ ಸುಮಾರು 18 ಗಂಟೆಗಳು ಸುದೀರ್ಘ ವಿಚಾರಣೆ ನಡೆಸಿ ಇಡಿ ಅಧಿಕಾರಿಗಳು ನಂತರ ಅವರನ್ನು ವಶಕ್ಕೆ ಪಡೆದುಕೊಂಡರು. ಬೆಳಗ್ಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಅವರಿಗೆ ಏದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಬಾಲಾಜಿ ಅವರು ಅಸ್ವಸ್ಥರಾಗಿ ಬಿದ್ದು ಬಿದ್ದು ಅಳುತ್ತಿರುವ ದೃಶ್ಯ ಸೆರೆಯಾಗಿದೆಯ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರ ಕಿವಿಯ ಬಳಿ ಊತವಿದ್ದು, ಅವರ ಇಸಿಜಿಯಲ್ಲಿ ವೈತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿತ್ರಹಿಂಸೆ ನೀಡಿದ ಲಕ್ಷಣ ?
ಸಚಿವ ಸೆಂಥಿಲ್ ಬಾಲಾಜಿ ಬಂಧನವಾಗುತ್ತಿದ್ದಂತೆ ಇದೀಗ ಡಿಎಂಕೆ ಪಾಳಯದಲ್ಲಿ ಆತಂಕ ಮನೆಮಾಡಿದೆ. ಬಂಧನದಲ್ಲಿರುವ ಸಚಿವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಸಚಿವರಾದ ಪಿ ಕೆ ಶೇಕರ್ ಬಾಬು ಮತ್ತು ಉದಯನಿಧಿ ಸ್ಟಾಲಿನ್ ಧಾವಿಸಿದರು.
ಸಚಿವ ಬಾಲಾಜಿಗೆ ಚಿತ್ರಹಿಂಸೆ ನೀಡಿದ ಲಕ್ಷಣಗಳು ಕಾಣಿಸುತ್ತಿವೆ ಎಂದು ಇದೇ ಸಂದರ್ಭದಲ್ಲಿ ಶೇಕರ್ ಬಾಬು ಆರೋಪಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರ ಹೆಸರನ್ನು ಕರೆದರೂ ಅವರು ಪ್ರತಿಕ್ರಿಯೆ ನೀಡಿಲ್ಲ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕಾಲಿನಲ್ಲಿ ಊತವಿದೆ, ಅವರನ್ನು ಆಸ್ಪತ್ರೆಗೆ ಕರೆದುತಂದ ಸ್ಥಿತಿ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಶೇಕರ್ ಬಾಬು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಕೆಟ್ಟ ರಾಜಕಾರಣವನ್ನು ವಿರೋಧಿಸುವವರ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು. ಅಬಕಾರಿ ಖಾತೆಯನ್ನು ಕೂಡ ಹೊಂದಿರುವ ಬಾಲಾಜಿ ವಿರುದ್ಧ ಉದ್ಯೋಗಕ್ಕಾಗಿ ನಗದು ಹಗರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಪೊಲೀಸರು ಮತ್ತು ಇಡಿಗೆ ಅನುಮತಿ ನೀಡಿದ ನಂತರ ಈ ಬಂಧನವಾಗಿದೆ ಎಂದು ತಿಳಿದುಬಂದಿದೆ.
ಸೆಂಥಿಲ್ ಬಾಲಾಜಿ ಅವರ ಬಂಧನ ಇದೀಗ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿಯ ಅಲೆಯನ್ನು ಎಬ್ಬಿಸಿದೆ. ಮುನ್ನೆಚ್ಚರಿಗೆ ಕ್ರಮವಾಗಿ ಆಸ್ಪತ್ರೆ ಮತ್ತು ಆಯಕಟ್ಟಿನ ಸ್ಥಳದಲ್ಲಿ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತೆ ಮಾಡಲಾಗಿದೆ.

More News