ಪ್ರೀತ್ಸಿದ್ ಆಯ್ತು.. ಎಂಗೇಜ್ ಕೂಡ ಆಗಾಯ್ತು.. ನನ್ನ ಪ್ರೀತಿ ಸಿಕ್ಬಿಡ್ತು ಎಂದು ಸೋಷಿಯಲ್ ಮೀಡಿಯಾ ತುಂಬೆಲ್ಲಾ ಖುಷಿ ಖುಷಿಯಾಗಿಯೇ ಪೋಸ್ಟ್ ಹಾಕಿದ್ದ ಲವ್ ಬರ್ಡ್ ವರುಣ್ ಲಾವಣ್ಯ ಮದ್ವೆಗೆ ಕಂಡಿಷನ್ ಅಪ್ಲೈ
ಮಾಡಿ ನಿರ್ಧಾರ ಮಾಡಲಾಗಿದ್ಯಂತೆ..
ಸ್ಟಾರ್ ನಟ ನಟಿಯರು ಒಟ್ಟೊಟ್ಟಿಗೆ ನಟಿಸೋದು, ನಟಿಸುತ್ತಲೇ ಪ್ರೀತಿಯಲ್ಲಿ ಬಿಳೋದು.. ಹೊಸ ವಿಚಾರವೇನೂ ಅಲ್ಲ.. ಹೀಗೆ ಪ್ರೀತಿಯಲ್ಲಿ ಬಿದ್ದು, ಮದ್ವೆ ಆಗಿ, ಹೊಂದಾಣಿಕೆ ಆಗ್ತಿಲ್ಲ ಎಂದು ದೂರಾದ ಜೋಡಿಗಳನ್ನೂ ನಾವು ನೋಡಿದ್ದೇವೆ. ಒಟ್ಟಿಗೆ ಸಿನಿಮಾ ಮಾಡಿ, ಆರು ವರ್ಷ ಪ್ರೀತಿಸಿ ಮದ್ವೆಯಾದ ಮೂರೇ ವರ್ಷಕ್ಕೆ ಸಮಂತಾ ಮತ್ತು ನಾಗಚೈತನ್ಯ ಸಂಬಂಧ ಹಳಸಿತ್ತು. ಅದಕ್ಕೆ ಮುಖ್ಯ ಕಾರಣ ಸಮಂತಾ ಸಿನಿ ಇಂಡಸ್ಟ್ರಿ ಯಲ್ಲೇ ಉಳಿದಿದ್ದು ಎನ್ನಲಾಗಿದೆ. ಇದೀಗ ಅದೇ ಸವಾಲು ಲಾವಣ್ಯ ಮುಂದಿದೆ..

ಒಂದಿಷ್ಟು ಮಂದಿಗೆ ಕೆರಿಯರ್ ಗ್ರೋತ್ ಮುಖ್ಯ ಆಗಿರುತ್ತೆ. ಮತ್ತಷ್ಟು ಮಂದಿಗೆ ಮದ್ವೆ ಬದುಕೇ ಮುಖ್ಯ ಆಗಿರುತ್ತೆ. ಪರ್ಸನಲ್ ಲೈಫ್ ಚನ್ನಾಗಿ ಇರ್ಬೇಕೆಂದು ಸೈಡ್ ಲೈನ್ ಆಗ್ಬಿಡ್ತಾರೆ. ಇಂಥದ್ದೇ ಒಂದು ಸವಾಲು ಇದೀಗ ಲಾವಣ್ಯಗೆ ಎದುರಾಗಿದೆ.

ಹೌದು, ಮದ್ವೆ ಬಳಿಕ ಸಿನಿಮಾ ಇಂಡಸ್ಟ್ರಿ ಯಲ್ಲಿ ಉಳಿಯಬಾರದು ಎಂಬ ಷರತ್ತಿನ ಮೇರೆಗೆ ಲಾವಣ್ಯ ವರುಣ್ ರನ್ನ ಮದ್ವೆ ಆಗ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಲಾವಣ್ಯ ಕೂಡ ಒಕೆ ಅಂದಿದ್ದು, ತಮ್ಮದೂ ಎರಡು ಕಂಡಿಷನ್ ನ್ನು ವರುಣ್ ಕುಟುಂಬದ ಮುಂದೆ ಇಟ್ಟಿದ್ದಾರೆ.
ಲಾವಣ್ಯ ತ್ರಿಪಾಠಿ ಭರತನಾಟ್ಯ ನೃತ್ಯಗಾರ್ತಿ. ಶೋ ಕೊಡುವ ಸಂದರ್ಭ ಬಂದರೆ ಹೋಗ್ತೇನೆ ಎಂದಿದ್ದಾರೆ. ಜೊತೆಗೆ ಮದುವೆ ನಂತರ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಿನಿಮಾ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ತೆರೆಹಿಂದೆ ಆದರೂ ಚಿತ್ರರಂಗದಲ್ಲಿ ಇರ್ತೀನಿ ಎಂದು ತಮ್ಮ ಅಭಿಪ್ರಾಯ ವನ್ನೂ ಮುಂದಿಟ್ಟಿದ್ದಾರಂತೆ. ಇದಕ್ಕೆ ವರುಣ್ ತಂದೆ ನಾಗಬಾಬು ಒಪ್ಪಿಗೆ ಸೂಚಿಸಿದ್ದು, ಈ ವರ್ಷಾಂತ್ಯಕ್ಕೆ ಇಟಲಿಯಲ್ಲಿ ವರುಣ್- ಲಾವಣ್ಯ ಡೆಸ್ಟಿನೇಷನ್ ಮದುವೆ ಪ್ಲ್ಯಾನ್ ಮಾಡಿದ್ದಾರೆ.




