ಮಾತು ಮಾತಿಗೂ ಸದ್ದು ಮಾಡಿ ಸುದ್ದಿ ಮಾಡ್ತಿದ್ದ ಬಿಗ್ ಬಾಸ್ ಮನೆಯ ಒಳ್ಳೆ ಹುಡ್ಗ ಪ್ರಥಮ್ ಗಪ್ ಚುಪ್ ಅಂತ ಮದ್ವೆ ತಯಾರಿ ಮಾಡ್ಕೊಳ್ತಿದ್ದಾರೆ. ಅರೇ ಏನಿದು.. ಸೈಲೆಂಟ್ ಆಗಿಯೇ ಇದ್ದು, ಈ ಬಾರಿ ಸುದ್ದಿ ಮಾಡ್ಬಿಟ್ರಲ್ಲಾ ಎಂಬ ಪ್ರಶ್ನೆಗೆ ನನ್ನ ಹುಡ್ಗಿ ಸಿದ್ದರಾಮಯ್ಯ, ರವಿಚಂದ್ರನ್ ರ ಹೆಂಡ್ತಿಯಂಗೇ ಎಂದು ನಾಚಿ ನೀರಾಗಿದ್ದಾರೆ.
ನಟ ಪ್ರಥಮ್ ಮಂಡ್ಯ ಮೂಲದ ಭಾನುಶ್ರೀ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾನುಶ್ರೀ, ಡಿಗ್ರಿ ಮುಗ್ಸಿದ್ದು, ಮಾಸ್ಟರ್ ಮಾಡೋ ತಯಾರಿಯಲ್ಲಿದ್ದಾರೆ. ಏನಿದು ಸುದ್ದಿ ಕೊಡ್ದೆ ಸಿಂಪಲ್ ಆಗಿ ಎಂಗೇಜ್ ಆಗ್ಬಿಟ್ರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ಆಡಂಬರ, ವೈಭವ ಇಲ್ಲದೆ ಮದ್ವೆ ಆಗ್ತಿದ್ದೇನೆ ಎಂದಿದ್ದಾರೆ. ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ. ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ ಎಂದರು.
ಮದ್ವೆ ತಯಾರಿ ಕುರಿತು ಮಾತನಾಡಿದ ಅವರು, ಮದುವೆ ಹೆಣ್ಣಿನ ಕಡೆ ಅವ್ರು ಮಾಡ್ತಾರೆ. ಅವ್ರಿಗೆ ಹೇಗೆ ಇಷ್ಟವೋ ಹಾಗೇ ಮಾಡ್ಲಿ. ಆದರೆ ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ ಹಾಕಿಸ್ತೀನಿ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನೋಡಿ ನನ್ನ ಮದುವೆಯ ಮೆನು. ನನ್ನಾಕೆಗೆ ಧ್ರುವ ಸರ್ಜಾ ಅಂದ್ರೆ ಬಲು ಇಷ್ಟ. ಶಿವಣ್ಣ ಅಂದ್ರೂ ತುಂಬಾ ಗೌರವ. ಅವರು ನಮ್ಮ ಮದುವೆಗೆ ಬರಬೇಕು ಅನ್ನೋದು ನನ್ನಾಕೆಯ ಆಸೆ. ಅವರನ್ನ ಇನ್ವೈಟ್ ಮಾಡೋ ಪ್ಲಾನ್ ಇದೆ. ನಟ ಯಶ್, ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಮದುವೆಗೆ ಆಮಂತ್ರಣ ನೀಡುತ್ತೇನೆ ಎಂದು ತಿಳಿಸಿದರು.




