ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡುವ ವೇಳೆಯೇ ಸ್ಯಾಂಡಲ್ ವುಡ್ ನಿರ್ಮಾಪಕ ಎಸ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿನಿಮಾದಲ್ಲಿ ಆ್ಯಕ್ಟ್ ಮಾಡೋ ಚಾನ್ಸ್ ಕೊಡಿಸ್ತೀನಿ.. ನಿನ್ನನ್ನು ಸ್ಟಾರ್ ಮಾಡ್ತೀನಿ ಎಂದು ಸ್ಯಾಂಡಲ್ ವುಡ್ ನಿರ್ಮಾಪಕ ಎಸ್ ಕುಮಾರ್ ಮಹಿಳೆಯೊರ್ವರ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
“the colour of tomato” ಮತ್ತು ಫಿಪ್ಟಿ ಚಿತ್ರದ ನಿರ್ಮಾಣ ಕ್ಕೆ ಎಸ್ ಕುಮಾರ್ ಮುಂದಾಗಿರುತ್ತಾನೆ. ಇದೇ ವೇಳೆ ಮಹಿಳೆಯೊರ್ವರನ್ನ ಪರಿಚಯ ಮಾಡಿಕೊಳ್ಳೋ ಕುಮಾರ್, ನೀವು ನಮ್ಮ ಸಿನಿಮಾ ಸ್ಕ್ರಿಪ್ಟ್ ಗೆ ತಕ್ಕಂತೆ ಇದ್ದೀರಿ. ನಿಮ್ಮ ರೀತಿಯ ಫೇಸ್ ನ್ನ ನಾನು ಹುಡುಕ್ತಿದ್ದೆ ಎಂದು ಹೇಳಿಕೊಂಡು ಮಹಿಳೆಗೆ ಹತ್ತಿರವಾಗಿದ್ದಾನೆ.
ಮಹಿಳೆ ವಿಧವೆಯಾಗಿದ್ದು, ಆಕೆ ಬಳಿ ಸಾಕಷ್ಟು ಹಣವಿದೆ ಎಂಬುದನ್ನ ಅರಿತ ಎಸ್ ಕುಮಾರ್, ನನ್ನ ಸಿನಿಮಾದಲ್ಲಿ ನಿನ್ನನ್ನು ಹಿರೋಹಿನ್ ಮಾಡಿಸ್ತೀನಿ ಎಂದು ಹೇಳುತ್ತಾ ಮಹಿಳೆಯಿಂದ 75 ಲಕ್ಷ ಪೀಕಿದ್ದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
75 ಲಕ್ಷ ಕೊಡು, ಆ ಹಣ ದುಪ್ಪಟ್ಟಾಗುತ್ತೆ. 75 ಲಕ್ಷ ಹಣ ಹಾಕಿದರೆ ಒಂದು ವರೆ ಕೋಟಿ ರೂಪಾಯಿ ಆಗುತ್ತೆ ಎಂದು ನಿರ್ಮಾಪಕ ಕುಮಾರ್ ಹಣ ಪಡೆದು ಸುಮ್ಮನಾಗಿಬಿಟ್ಟಿದ್ದಾನೆ. ಮಹಿಳೆ ಸಾಕಷ್ಟು ವಿಚಾರಿಸಿದ ಬಳಿಕ ಆತ ಯಾವುದೇ ಸಿನಿಮಾ ನಿರ್ಮಾಣ ಮಾಡಿಲ್ಲ ಎಂದು ತಿಳಿದು ಬಂದಿದೆ. ಹಣ ವಾಪಸ್ ಕೊಡಿ ಎಂದು ಕೇಳಲು ಹೋದಾಗ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡಿಸ್ತೀನಿ ಎಂದು ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಮತ್ತೇ ಮಹಿಳೆ ಹಣ ಕೇಳಲು ತೆರಳಿದಾಗ ಮತ್ತೊಮ್ಮೆ ಅತ್ಯಾಚಾರ ಮಾಡಲು ಯತ್ನ ಮಾಡುವ ವೇಳೆಯೇ ಮಹಿಳೆ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕುಮಾರ್ ನನ್ನು ವಶಕ್ಕೆ ಪಡೆದಿದ್ದು, ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




