ಹಾವೇರಿ: ಕದ್ದ ಹುಂಡಿಯನ್ನು ಹೊರಲಾರದೆ ಕಳ್ಳರು ಬಿಸಾಡಿ ಹೋದ ಘಟನೆ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ರಟ್ಟಿಹಳ್ಳಿ ಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯಲ್ಲಿ ಖತರ್ನಾಕ್ ಗ್ಯಾಂಗ್ ಒಂದು ತಲೆ ಎತ್ತಿದೆ. ಸುತ್ತ ಮುತ್ತಲಿನ ದೇವಸ್ಥಾನ ದ ಹುಂಡಿಗಳೇ ಇವರ ಮೈನ್ ಟಾರ್ಗೆಟ್. ಬೆಳಗೆದ್ದು ಭಕ್ತರ ಸೋಗಿನಲ್ಲಿ
ಸುತ್ತ ಮುತ್ತ ಏರಿಯಾದಲ್ಲಿನ ದೇವಸ್ಥಾನ ಕ್ಕೆ ಭೇಟಿ ಕೊಡ್ತಿದ್ದ ಈ ಕಳ್ಳರ ಗ್ಯಾಂಗ್ ಹುಂಡಿ ಇಟ್ಟ ಜಾಗ, ಅದನ್ನು ಸೇಫ್ ಆಗಿ ದೇವಸ್ಥಾನ ದಿಂದ ಹೇಗೆ ತೆಗೆಯಬಹುದು..? ಎಷ್ಟು ಗಾತ್ರದ ಹುಂಡಿ ಎಂದೆಲ್ಲಾ ಸ್ಕೆಚ್ ಹಾಕಿ ರಾತ್ರಿ ವೇಳೆಗೆ ದಾಳಿ ಇಡುತ್ತಿತ್ತು.
ದಾಳಿ ವೇಳೆಯೂ ತನ್ನದೇ ಲೆಕ್ಕಾಚಾರ ಹಾಕಿ ಫೀಲ್ಡ್ ಗೆ ಇಳಿತಿದ್ದ ಕಳ್ಳರ ಗ್ಯಾಂಗ್ ಯಾವ ಗ್ರಾಮದಲ್ಲಿ ಕಳ್ಳತನ ಮಾಡಬೇಕೆಂದು ಮೊದಲೇ ಪ್ಲ್ಯಾನ್ ಮಾಡುತ್ತಿತ್ತು. ಎಲ್ಲಿ ಜಾಗ ಫಿಗ್ಸ್ ಆಗ್ತಿತ್ತೋ ಆ ಸ್ಥಳದಲ್ಲಿ ಒಂದೆರಡು ತಿಂಗಳು ಇದ್ದು, ಪರಿಸ್ಥಿತಿ ಕಂಡು ದಾಳಿ ಇಡ್ತಿತ್ತು. ಹಾಗೇ
ರಟ್ಟಿಹಳ್ಳಿ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಬಿಡು ಬಿಟ್ಟಿದ್ದ ಗ್ಯಾಂಗ್ ಪುರದಕೆರೆ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಪ್ಲ್ಯಾನ್ ಮಾಡಿದೆ. ಎಂದಿನಂತೆ ಕಡು ಗತ್ತಲಿನಲ್ಲಿ ದಾಳಿ ಇಟ್ಟ ಖತರ್ನಾಕ್ ಗಳಿಗೆ ಸಂಕಷ್ಟವೊಂದು ಎದರುರಾಗಿದೆ.

ದೊಡ್ಡ ಹುಂಡಿ ಕಂಡು ಖುಷ್ ಆದ ಖದೀಮರು ಬಸವೇಶ್ವರ ದೇವಸ್ಥಾನ ದ ಹುಂಡಿಯನ್ನ ಎತ್ತಂಗಡಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ರಾತ್ರಿ ಪಾಳಿ ತೆರಳಿದವರಿಗೆ ಹೊರಲಾರದ ಹುಂಡಿಗೆ ಕೈ ಹಾಕಿದ್ದು ಮನವರಿಕೆ ಆಗಿದೆ. ಆದರೂ ಹುಂಡಿ ದೊಡ್ಡದಿತ್ತಲ್ಲಾ.. ಕಷ್ಟ ಪಟ್ಟು ಎತ್ತಿಕೊಂಡು ಸ್ವಲ್ಪ ದೂರ ಕ್ರಮಿಸುವಾಗಲೇ ಗ್ರಾಮದವರ ಕಣ್ಣಿಗೆ ಬಿದ್ದಿದ್ದಾರೆ. ಇದರಿಂದ ವಿಚಲಿತರಾದ ಕಳ್ಳರು ಕದ್ದ ಹುಂಡಿಯನ್ನ
ಬಿಸಾಡಿ ಹೋಗಿದ್ದು, ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




