Gruha Lakshmi Scheme: ಟ್ಯಾಕ್ಸ್ ಪೇಯರ್ಸ್ ಇದ್ದು ಸುಳ್ಳು ಮಾಹಿತಿ ನೀಡಿದ್ರೆ ಗೃಹ ಲಕ್ಷ್ಮಿ ಅರ್ಜಿ ರಿಜೆಕ್ಟ್

ಬೆಂಗಳೂರು: ಸುಳ್ಳು ಮಾಹಿತಿ ನೀಡುವವರ ವಿರುದ್ಧ ಪ್ಲಾನ್ ಮಾಡಿರುವ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಫಲಾನುಭವಿ ಮಹಿಳೆಯ ಪತಿ ಟ್ಯಾಕ್ಸ್ ಪೇಯರ್ಸ್ ಆಗಿದ್ರೆ ಅರ್ಜಿ ಸಲ್ಲಿಸುವ ವೇಳೆಯೇ ರಿಜೆಕ್ಟ್ ಆಗುವ ವ್ಯವಸ್ಥೆ ಜಾರಿಗೆ ತಂದಿದೆ.

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನ ಪ್ರಾರಂಭ ಆಗಲಿದೆ. ಈ ಹಿನ್ನಲೆ ವಿಧಾನಸೌಧದಲ್ಲಿ ಗೋಷ್ಠಿ ನಡೆಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸುಳ್ಳು ಮಾಹಿತಿ ನೀಡಿದ್ರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಇ ಗವರ್ನೆನ್ಸ್ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಮಾಡಿದ್ದೇವೆ. ಅರ್ಜಿದಾರರ ಪತಿ ಟ್ಯಾಕ್ಸ್ ಪೇಯರ್ಸ್ ಆಗಿದ್ರೆ ಅರ್ಜಿ ಸ್ವೀಕಾರ ಆಗೋದಿಲ್ಲ.‌ಹೀಗಾಗಿ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

“ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇಟ್ಟಿಲ್ಲ”

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹತ್ವದ ನಿರ್ಧಾರ ಆಗಿದೆ. ನಮ್ಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಗೃಹ ಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿ ಶಕ್ತಿ ಶಾಲಿಯಾಗ್ತಾಳೆ. ಆಗ ಸಮಾಜದ ಶಕ್ತಿ ವೃದ್ದಿ ಆಗುತ್ತೆ. ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ನವರಿಗೆ ಈ ಯೋಜನೆ ಲಾಭ ಸಿಗಲಿದೆ. ನಾಳೆಯಿಂದ ಅರ್ಜಿ ಸಲ್ಲಿಸಬಹುದು.‌ ಆಧಾರ್ ಕಾರ್ಡ್ ಓಟಿಪಿ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು. ಕೆಲವೊಂದು ಕಾರಣಗಳಿಂದ ಜೂನ್ ೧೬ ರಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಗ್ರಾಮ ಒನ್,ಬೆಂಗಳೂರು ಒನ್,ಕರ್ನಾಟಕ ಒನ್ ಮೂಲಕ ಭೌತಿಕವಾಗಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ನಾಳೆ ಮಧ್ಯಾಹ್ನ ೧.೩೦ಕ್ಕೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಸಾಂಕೇತಿಕವಾಗಿ ಸಿಎಂ ರಿಂದಲೇ ನಾಳೆ ಶಕ್ತಿ ಭವನದಲ್ಲಿ ಸೇವಾ ಸಿಂಧು ವೆಬ್ ಲಾಂಚ್ ಆಗಲಿದೆ. ಲಾಂಚಿಂಗ್ ವೇಳೆ ಐದು ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ‌.
ಏನಾದರೂ ಗೊಂದಲಗಳಿದ್ದರೆ, 1902 ಹೆಲ್ಪ್ ಲೈನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಮತ್ತುಅರ್ಜಿ ಸಲ್ಲಿಕೆಗೆ ಯಾವುದೇ ಫೀಸ್ ಕೊಡುವಂತಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಿ ಮಧ್ಯವರ್ತಿಗಳ ಹಾವಳಿ ಭ್ರಷ್ಟಾಚಾರ ತಪ್ಪಿಸಲು ನೇರವಾಗಿ ಹೋಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ಗೆ ಕೊನೆ ದಿನಾಂಕ ಇಟ್ಟಿಲ್ಲ ಎಂದು ತಿಳಿಸಿದರು.

More News