ಬೆಂಗಳೂರು : ರಾಜ್ಯದಲ್ಲಿ ಮದ್ಯದ ಬೆಲೆಯನ್ನು ಏರಿಕೆ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಣ್ಣೆ ರೇಟ್ ಜಾಸ್ತಿ ಮಾಡುವ ಯಾವುದೇ ರೀತಿಯ ಪ್ರಸ್ತಾಪ ನಮ್ಮ ಇಲಾಖೆ ಮುಂದಿಲ್ಲ ಎಂದರು. ಈಗಾಗಲೇ ರೇಟ್ ಜಾಸ್ತಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಮಾಹಿತಿಯೂ ಇಲ್ಲ, ಎಣ್ಣೆ ದರ ಏರಿಕೆ ಇದುವರೆಗೂ ಆಗಿಲ್ಲ ಎಂದರು.

ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್, ಕಳೆದ ಒಂದು ವಾರದಿಂದ ಮದ್ಯದ ರೇಟ್ ಸುಮಾರು 20 ರೂಪಾಯಿ ಹೆಚ್ಚಳ ಕಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ರಿಯಾಲಿಟಿ ಚೆಕ್ ಮಾಡುತ್ತೇನೆ ಎಂದರು.
ಒಂದು ವೇಳೆ ರೇಟ್ ಜಾಸ್ತಿ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಲ್ಲ, ಯಾರು ಮಾಡಿದ್ದಾರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಬಿ ತಿಮ್ಮಾಪುರ ತಿಳಿಸಿದರು.




