Minister HK Patil: ಬಡವರ ಕಲ್ಯಾಣ ಮಾಡಿದ್ರೆ ಸರ್ಕಾರ ದಿವಾಳಿಯಾಗುತ್ತೆ: ಬಿಜೆಪಿ ಮುಖಂಡರ ಹೇಳಿಕೆಗೆ ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶ

ಬೆಂಗಳೂರು : ಬಡವರ ಕಲ್ಯಾಣ ಮಾಡಿದ್ರೆ ಸರ್ಕಾರ ದಿವಾಳಿಯಾಗುತ್ತೆ ಎಂಬ ಬಿಜೆಪಿ ಮುಖಂಡರ ಹೇಳಿಕೆ ಹಾಸ್ಯಾಸ್ಪದ ಎಂದು ಹೇಳಿದ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿಗರು ಭ್ರಮೆಯಲ್ಲಿದ್ದಾರೆ, ಒಂದು ವರ್ಷ ಆದ ಮೇಲೆ ಬಿಜೆಪಿಗೆ ನಿರಾಸೆಯಾಗುತ್ತೆ ಎಂದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುತ್ತಿಲ್ಲ ಎನ್ನುವುದು ಸುಳ್ಳು, ಸುಮ್ಮನೆ ಜನರ ಸಮಯವನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಎಸ್ಟಿ‌ ವಿಧೇಯಕಕ್ಕೆ ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗಿದೆ.

ಜಿಎಸ್ಟಿ‌ ವಿಧೇಯಕಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಲಾಗಿದ್ದು, ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ನಿಗದಿ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.
ಜಿಎಸ್ಟಿ ಸಲ್ಲಿಕೆಯಾಗಿರುವ ಮಾಹಿತಿ ಹಾಗೂ ದಾಖಲೆಗಳನ್ನು ಪಡೆಯಲು ಸರಳೀಕರಣ ವಿಧಾನದ ಕುರಿತು ಚರ್ಚಿಸಲಾಗಿದೆ. ಆರ್ ಟಿಐ ಅಡಿಯಲ್ಲಿ ಈ ಮಾಹಿತಿಗಳು ಲಭ್ಯವಿದೆ. ಆದರೂ ಅಗತ್ಯ ದಾಖಲೆ‌ ಮತ್ತು ಮಾಹಿತಿಗಾಗಿ ಸರಳೀಕರಣ ವಿಧಾನ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು

More News