Abhishek Amabareesh: ಊಟ ಇಲ್ಲದೇ ಹೋಗಬೇಕು ಅಂತ ಕರೆಸಿಲ್ಲ. ದಯವಿಟ್ಟು ಕ್ಷಮಿಸಿ ಬಿಡಿ: ಅಭಿಷೇಕ್ ಅಂಬರೀಶ್

ಮಂಡ್ಯ: ಊಟ ಇಲ್ಲದೇ ಹೋಗಬೇಕು ಅಂತ ಕರೆಸಿಲ್ಲ. ಯಾರು ಬೇಜಾರಾಗಬೇಡಿ. ತಂದೆ ಮೇಲೆ ಪ್ರೀತಿ ಇಟ್ಟುಕೊಂಡು ಬಂದಿದ್ದೀರಿ.. ದಯವಿಟ್ಟು ಕ್ಷಮಿಸಿ ಬಿಡಿ ಎಂದು ಅಭಿಷೇಕ್ ಅಂಬರೀಶ್ ಮನವಿ ಮಾಡಿದ್ದಾರೆ.

ಬೀಗರ ಊಟದಲ್ಲಿ ನಡೆದ ಜಟಾಪಟಿ ವಿಚಾರದ ಕುರಿತು ಗೋಷ್ಠಿ ಕರೆದು ಮಾತನಾಡಿದ ಅವರು, ಮಂಡ್ಯ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಊಟ ಖಾಲಿಯಾಗುತ್ತಾ ಬಂದ ಹಾಗೆ ರೆಡಿ ಮಾಡಿ ಎಂದು ಹೇಳಿದ್ದೇನೆ. ತುಂಬಾ ಊಟ ಹಾಳಾಗಿದೆ. ಬೀಗರ ಊಟ ಹಾಳು ಮಾಡಿದ್ದು ಯಾರು ಎಂದು ಗೊತ್ತಿಲ್ಲ. ಎಲೆಕ್ಷನ್ ಉದ್ದೇಶ ಇಟ್ಟುಕೊಂಡು ಬೀಗರ ಊಟ ಏರ್ಪಡಿಸಿಲ್ಲ. ಇದು ಅಂಬರೀಶ್ ಅಣ್ಣನ ಮಗನ ಸಮಾರಂಭ. ಇದರಲ್ಲಿ ರಾಜಕೀಯ ತರಬೇಡಿ. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ. ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡ್ರೇ ಅವರಿಗೂ ಒಳ್ಳೆಯದು ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು, ಊಟ ಬಿದ್ದಿದೆ. ಊಟ ಇಲ್ಲದೇ ಹೋಗಬೇಕು ಎಂದು ಕರೆಸಿಲ್ಲ. ಯಾರು ಬೇಜಾರಾಗಬೇಡಿ. ದಯವಿಟ್ಟು ಕ್ಷಮಿಸಿ ಬಿಡಿ ಎಂದು ಮನವಿ ಮಾಡಿದರು.

ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ತಂದೆ-ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಿಡಿಸಿದ್ದೇವೆ. ತುಂಬಾ ಜನ ಕಷ್ಟಪಟ್ಟು ವ್ಯವಸ್ಥೆ ಮಾಡಿದ್ರು. ಬೀಗರ ಊಟದಲ್ಲಿ ಶಾರ್ಟೇಜ್ ಆಗಿಲ್ಲ. ಯಾರಿಗೂ ದುಡ್ಡು ಕೊಟ್ಟು ಕರೆಸಿಲ್ಲ. ಪ್ರೀತಿ, ಅಭಿಮಾನದಿಂದ ಬಂದಿದ್ದಾರೆ. ಕೆಲವರು ಪ್ರವೋಕ್ ಮಾಡಿದಾಗ ಸಣ್ಣ ಪ್ರವೋಕ್ ಆದಾಗ ಅವ್ಯವಸ್ಥೆ ಆಗಿದೆ. ಅಡುಗೆ ಮನೆಗೆ ಕೆಲವರು ನುಗ್ಗಿದಾಗ ಘಟನೆ ಆಗಿದೆ
ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅನ್ನೋರು ಇದ್ದರು. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗ್ತಿದ್ದೆ. ಅವಿವಾ ಮಂಡ್ಯ ಜನತೆಯ ಪ್ರೀತಿ ಕಂಡು ಸ್ಪೀಚ್ ಲೇಸ್ ಆಗಿದ್ರು. ಇಷ್ಟು ಪ್ರೀತಿಯಾ ಅಂತ ಎಮೋಶನಲ್ ಆದ್ರು ಎಂದರು.

ಮದ್ವೆ ಬದುಕನ್ನು ಹೇಗೆ ಮ್ಯಾನೇಜ್ ಮಾಡ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲವ್ ಮಾಡುವಾಗ ಎಷ್ಟು ಈಸಿಯಾಗಿ ನಿಭಾಯಿಸಬಹುದೋ ಮದುವೆಯಾದ ಮೇಲೂ ಈಸಿಯಾಗಿ ನಿಭಾಯಿಸಬಹುದು ಅನ್ನೋ ಉದ್ದೇಶದಿಂದ ಮದುವೆಯಾದೆ. ಮುಂದಿನ ದಿನಗಳಲ್ಲಿ ಅವಿವಾ ನನ್ನ ಮೂವಿ ಪ್ರಮೋಷನ್ ಗೂ ಬರಬಹುದು ಎಂದು ತಿಳಿಸಿದರು.

More News