ಬೆಂಗಳೂರು : ವಿದ್ಯುತ್ ಬಿಲ್ ದರ ಏರಿಕೆ ವಿರೋಧದ ಬೆನ್ನಲ್ಲೇ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಅರ್ಜಿಗೆ ಇಂದಿನಿಂದ ಅವಕಾಶ ಮಾಡಿ ಆದೇಶ ಹೊರಡಿಸಿದೆ.
ವಿಧಾನಸಭೆ ಚುನಾವಣೆ ಹಾಗೂ ಚುನಾವಣೆಗೂ ಮುಂಚೆ ಕಾಂಗ್ರೆಸ್ ನಾಯಕರು ಐದು ಗ್ಯಾರಂಟಿಗಳನ್ನು ಘೋಷಿಸಿದ್ದರು. ಇದೀಗ ಎರಡನೇ ಅತಿಮುಖ್ಯ ಯೋಜನೆಗೆ ಚಾಲನೆ ನೀಡಿದೆ. ಪ್ರತಿ ಮನೆಗೆ ವಿದ್ಯುತ್ ಫ್ರೀ ಎಂದಿದ್ದ ಕೈ ಪಡೆ ಒಂದಷ್ಟು ರೂಲ್ಸ್ ಹಾಕುವ ಮೂಲಕ 200 ಯೂನಿಟ್ ವಿದ್ಯುತ್ ನೀಡಲು ನಿರ್ಧರಿಸಿತ್ತು. ಇದೀಗ ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಏನಾದರೂ ಗೊಂದಲ ಇದ್ದಲ್ಲಿ 1912 ಸಹಾಯವಾಣಿ ತೆರೆಯಲಾಗಿದೆ.

ಗೃಹಜ್ಯೋತಿ ಯೋಜನೆ ಮೂಲಕ ಅರ್ಜಿ ಸ್ವೀಕರಿಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಇದಕ್ಕಾಗಿ ಸೇವಾ ಸಿಂಧೂ ಪೋರ್ಟಲ್ ತೆರೆಯಲಾಗಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಾಡ ಕಛೇರಿ, ಬೆಂಗಳೂರು ಒನ್, ಸೈಬರ್ ಸೆಂಟರ್ ಅಥವಾ ನಮ್ಮ ಮೊಬೈಲ್ ನಲ್ಲೇ ಅಪ್ಲೈ ಮಾಡುವ ಅವಕಾಶ ಒದಗಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ..?
ಕರೆಂಟ್ ಬಿಲ್ ನಲ್ಲಿ RR ನಂಬರ್ ಇರುತ್ತೆ. ಅದನ್ನು ಯೋಜನೆ ಅರ್ಜಿಯಲ್ಲಿ ನಮೂದಿಸಬೇಕು. ಯೋಜನೆಗೆ ಅಗತ್ಯವಾದ ಓಟರ್ ಐಡಿ, ಮೊಬೈಲ್ ನಂಬರ್ ರಿಜಿಸ್ಟರ್ ಆದ ಆಧಾರ್ ಕಾರ್ಡ್ , ರೇಷನ್ ಕಾರ್ಡ್, ಇದರಲ್ಲಿ ಯಾವುದನ್ನಾದರೂ ಒಂದನ್ನ ಅಡ್ರಸ್ ಪ್ರೋಫ್ ಗೆ ನೀಡಿ, ಯೋಜನೆಯ ಲಾಭ ಪಡೆಯಬಹುದು.




