PARENTS WORSHIPPING SON: ಹೆತ್ತವರ ಮೂರ್ತಿ ಕೆತ್ತನೆ ಮಾಡಿ ಪೂಜಿಸುತ್ತಿರುವ ಮಾದರಿ ಪುತ್ರ…!

ಹಾವೇರಿ: ದಿಂವಗತರಾದ ತಂದೆ ತಾಯಿಯ ನೆನಪಿಗಾಗಿ ಅವರ ಮೂರ್ತಿಗಳನ್ನ ತಾನೇ ಕೆತ್ತಿ ಆ ಮೂರ್ತಿಗಳಿಗೆ ಪ್ರತಿದಿನ ಪೂಜಿ ಮಾಡುತ್ತಿರುವ ಅಪರೂಪದ ಪುತ್ರನೊಬ್ಬನಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿರುವ ವ್ಯಕ್ತಿ ಶಿವಪ್ಪ ನಿಂಗಪ್ಪ ದೊಡ್ಡಮನಿ. ಪಶುವೈದ್ಯನಾಗಿದ್ದ ಶಿವಪ್ಪ ನಿವೃತ್ತಿ ಹೊಂದಿದ್ದಾರೆ. ತಮ್ಮ ತಂದೆ – ತಾಯಿಯ ಮೂರ್ತಿಗಳನ್ನ ತಮ್ಮ ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ಇಟ್ಟು ಪ್ರತಿ ದಿನ ಶಿವಪ್ಪ ನಿಂಗಪ್ಪ ದೊಡ್ಡಮನಿ ಪೂಜೆ ಮಾಡುತ್ತಿದ್ದಾರೆ.
ಇನ್ನು ತಮ್ಮ ಪೋಷಕರ ಮೂರ್ತಿಯ ಬಳಿ ಶರಣ ಅಂಬಿಗರ ಚೌಡಯ್ಯ, ಸಿದ್ಧಾರೂಢರ ಮೂರ್ತಿಗಳನ್ನ ಕೆತ್ತನೆ ಮಾಡಿ ಪೂಜಿಸಲಾಗುತ್ತದೆ. ದಿವಂಗತರಾದ ತಂದೆ ನಿಂಗಪ್ಪ ತಾಯಿ ಶಿವಶರಣೆ ದೇವಿರಮ್ಮ ಮೃತಪಟ್ಡು ಸುಮಾರು ವರ್ಷಗಳಾಗಿವೆ.

ಮಗ ಶಿವಪ್ಪ ಪಾಲಕರ ನೆನಪಿನಲ್ಲಿ ಅವರ ಮೂರ್ತಿಗಳನ್ನ ಪೂಜಿಸುತ್ತಾ ಗ್ರಾಮದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. ಇಂದು ವಿಶ್ವ ಅಪ್ಪನ ದಿನವಾದ ಹಿನ್ನಲೆ ತಮ್ಮ ಅಪ್ಪನ ನೆನಪಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಮನೆಗೆ ಬಂದ ಅತಿಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು.

More News