Bengaluru Cramble For Water: ಬೆಂಗಳೂರಿಗೆ ಶುರುವಾಗಲಿದ್ಯಾ ನೀರಿಗಾಗಿ ಆಹಾಕಾರ..?:ಜುಲೈ ಮೊದಲ ವಾರದ ಬಳಿಕ ಬರಗಾಲ ಡಿಕ್ಲೇರ್ ಆಗುತ್ತಾ..?

ಬೆಂಗಳೂರು: ಕಾವೇರಿ ಒಡಲು ಬರಿದಾಗುವ ಆತಂಕ ಎದುರಾಗಿದೆ. ಮುಂಗಾರು ಸಮಯ ಬಂದರೂ ವರುಣ ಕೃಪೆ ತೋರದ ಹಿನ್ನಲೆಯಲ್ಲಿ ಕಾವೇರಿ ಜಲಾನಯನ ಬರಿದಾಗ್ತಿದೆ.

ಕೆ ಆರ್ ಎಸ್ ಡ್ಯಾಂ ನ ನೀರಿನ ಮಟ್ಟ ಪ್ರಸ್ತುತ 80 ಅಡಿ ಮಾತ್ರ ಸಂಗ್ರವಾಗಿದೆ. 49.452 ಟಿಎಂಸಿ ಯಲ್ಲಿ 10 ಟಿಎಮ್ ಸಿ ನೀರು ಸಂಗ್ರಹವಾಗಿದೆ. 10 ರಲ್ಲಿ ಮೂರು ಟಿಎಂಸಿ ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಬೆಂಗಳೂರಿಗೂ ಇಲ್ಲಿಂದಲೇ ನೀರು ಬರುವ ಹಿನ್ನಲೆ ನೀರಿನ ಆಹಾಕಾರ ಎದುರಾಗುತ್ತಾ..? ಎಂಬ ಪ್ರಶ್ನೆ ಮೂಡಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಜೂನ್ ಅಂತ್ಯ ಮತ್ತು ಜುಲೈ ಮೊದಲ ವಾರ ತನಕ ಕಾದು ಬಳಿಕ ಬರಗಾಲ ಡಿಕ್ಲೇರ್ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಮಾಡುತ್ತೇವೆ ಎಂದರು.

ಈ ಬಗ್ಗೆ ಮಾತನಾಡಿದ ಸಚಿವರು, ಜೂನ್ ತಿಂಗಳಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದೆವು. ಮುಂಗಾರು ತಡವಾಗಿ ಆರಂಭವಾಗಿದೆ.ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಮಳೆ ಕಡಿಮೆಯಾಗಿದೆ.
ನಿ‌ನ್ನೆಯಿಂದ ಮಳೆ ಕೊರತೆ ಇತ್ತು..ನಿನ್ನೆ ಕರಾವಳಿ ಭಾಗದಲ್ಲಿ ಮಳೆಯಾಗಿದೆ.ಉಡುಪಿ, ಮಂಗಳೂರು, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಬಿದ್ದಿದೆ.ಮುಂಗಾರು ಪೂರ್ವ ಮಳೆ ವಾಸ್ತವಕ್ಕಿಂತ ಹೆಚ್ಚಿನ ಮಳೆಯಾಗಿದೆ. ವಿಜ್ಞಾನಿಗಳು ಮಳೆಯ ಭರವಸೆ ನೀಡಿದ್ದಾರೆ.ಡಿಸಿಗಳ ಜತೆ ಸಭೆ ನಡೆಸಿ ಪರ್ಯಾಯ ವ್ಯವಸ್ಥೆಯ ಸಿದ್ದತೆ ಮಾಡಿಕೊಳ್ಳಲು ಹೇಳಿದ್ದೇವೆ. ಜೂನ್ ಅಂತ್ಯ ಮತ್ತು ಜುಲೈ ಮೊದಲ ವಾರ ತನಕ ಕಾದು ಬಳಿಕ ಬರಗಾಲ ಡಿಕ್ಲೇರ್ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಮಾಡುತ್ತೇವೆ. ಮೋಡ ಬಿತ್ತನೆ ಬಗ್ಗೆ ಯಾವುದೇ ಅಗತ್ಯ ಕಂಡು ಬರುವುದಿಲ್ಲ. ಹವಾಮಾನ ಇಲಾಖೆಯವರು ೯೬-೧೦೬ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ ಎಂದು ತಿಳಿಸಿದರು.

More News