ಬ್ರೇಕಪ್ ಸುದ್ದಿ ಸಧ್ಯ ಸಿನಿ ದುನಿಯಾದಲ್ಲಿ ಸದ್ದು ಮಾಡ್ತಿದೆ. ಒಂದೆಡೆ ವರುಣ್-ಲಾವಣ್ಯ ವಿವಾಹ ಸಂಭ್ರಮ ಇದ್ರೆ ಮತ್ತೊಂದೆಡೆ ಮಗಳ ವಿಚ್ಚೇದನ ನೋವು ಚಿರಂಜೀವಿ ಕುಟುಂಬವನ್ನು ಕಾಡ್ತಿದೆ.
ಚಿರಂಜೀವಿ ಪುತ್ರಿ ಶ್ರೀಜಾ ಮತ್ತು ಪತಿ ಕಲ್ಯಾಣ್ ದೇವ್ ಸಂಬಂಧ ಮುರಿದು ಬಿದ್ದ ಬಗ್ಗೆ ಸಾಕಷ್ಟು ಊಹಾಪೋಹ ಎದ್ದಿತ್ತು. ವರುಣ್ ಲಾವಣ್ಯ ಎಂಗೇಜ್ಮೆಂಟ್ ಸಂಭ್ರಮದಲ್ಲಿ ಶ್ರೀಜಾ ಒಬ್ಬರೇ ಇದ್ದದ್ದು, ಬ್ರೇಕಪ್ ಸುದ್ದಿಗೆ ಇನ್ನಷ್ಟು ಇಂಬು ನೀಡ್ತು. ಇದೀಗ ಪತಿ ಕಲ್ಯಾಣ್ ದೇವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನ ಮಾಡಿದ್ದು, ಅಧಿಕೃತ ವಾಗಿ ಬೇರಾಗಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಚಿರಂಜೀವಿ ಪುತ್ರಿ ಶ್ರೀಜಾ ಈ ಮೊದಲು ಸೀರೀಶ್ ಭಾರಧ್ವಜ್ ಎಂಬಾತನನ್ನು ಪ್ರೇಮಿಸಿ ಓಡಿ ಹೋಗಿ ಮದ್ವೆ ಆಗಿ ಕುಟುಂಬಕ್ಕೆ ಇನ್ನಿಲ್ಲದ ಮುಜುಗರ ತಂದೊಡ್ಡಿದ್ದರು. ಸಾಕಷ್ಟು ಹೋರಾಡಿ ಗಳಿಸಿಕೊಂಡ ಪ್ರೇಮ ಕೆಲವೇ ದಿನಕ್ಕೆ ಮುರಿದು ಬಿದ್ದಿತ್ತು. ಮನಸ್ಥಾಪ ದಿಂದ ಮೊದಲ ಪತಿಯೊಂದಿಗೆ ದೂರಾದ ಶ್ರೀಜಾ ತಂದೆ ಸೂಚಿಸಿದ
ವರ ಉದ್ಯಮಿ ಕಲ್ಯಾಣ್ ದೇವ್ ಜೊತೆ 2ನೇ ಬಾರಿ ಬೆಂಗಳೂರಿನಲ್ಲಿ ವಿವಾಹವಾದರು. ಆದರೆ ಇದೀಗ ಇವರಿಬ್ಬರೂ ದೂರಾದ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ.

ಕಲ್ಯಾಣ್ ದೇವ್ ರೊಂದಿಗೆ ವಿಚ್ಚೇದನ ನೀಡಿದ ಬಗ್ಗೆ ಚಿರಂಜೀವಿ ಕುಟುಂಬದಿಂದ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಈಗ ಪತಿ ಕಲ್ಯಾಣ ದೇವ್ ಮಾಡಿರುವ ಪೋಸ್ಟ್‌ನಿಂದ ವಿಚ್ಚೇದನ ಆಗಿರೋದು ಖಚಿತ ಎನ್ನಲಾಗ್ತಿದೆ.
ಮಗಳ ಜೊತೆ ಕಳೆದ ವೀಡಿಯೋ ಶೇರ್ ಮಾಡಿ ಭಾವುಕರಾಗಿರುವ ಅವರು, ವಾರಕ್ಕೆ 4 ಗಂಟೆ ಮಾತ್ರ ನಿನ್ನೊಂದಿಗೆ ಕಳೆಯಲು ಸಮಯ ಸಿಗುತ್ತೆ. ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರಿಸುತ್ತೆ.. ಮಿಸ್ ಯು ನವ್ವು ಎಂದು ಪೋಸ್ಟ್ ಮಾಡಿದ್ದಾರೆ.




