Pratap Simha Illegal Property: ಸಂಸದ ಪ್ರತಾಪ ಸಿಂಹ ಕೊಡಗಿನಲ್ಲಿ ಬೇನಾಮಿ ಆಸ್ತಿ: KPCC ವಕ್ತಾರ ಲಕ್ಷ್ಮಣ ಗಂಭೀರ ಆರೋಪ

ಮೈಸೂರು : ಕೊಡಗು ನ್ಯೂಟ್ರಿಷಿಯನ್ ಎಂಬ ಕಂಪನಿಯಲ್ಲಿ ಬೇನಾಮಿಯಾಗಿ ಮೈಸೂರು- ಕೊಡಗು ಜಿಲ್ಲೆ ಸಂಸದ ಪ್ರತಾಪ್ ಸಿಂಹ ಬೇನಾಮಿ ಹೆಸರಿನಲ್ಲಿ ಸುಮಾರು 60 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಣಣ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಂಪನಿಯಲ್ಲಿ ಕೆಲವು ಅಧಿಕಾರಿಗಳೂ ಹಣ ಹೂಡಿದ್ದಾರೆ ಈ ಬಗ್ಗೆ ಐಟಿ ಹಾಗೂ ಇಡಿಗೆ ಶೀಘ್ರದಲ್ಲಿಯೇ ದೂರು ನೀಡಲಾಗುವುದು ಎಂದು ತಿಳಿಸಿದರು. ಈ ಹಗರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಬ್ಬರ ಮೂಲಕ ಹಣ ವಸೂಲಿಯನ್ನು ಪ್ರತಾಪ್ ಸಿಂಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆ ಯೋಜನೆಯಲ್ಲಿ ಕಮಿಷನ್ ರೂಪದಲ್ಲಿ ಪಡೆದ ಹಣವನ್ನು ಈ ಮೂಲಕ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

More News