ತಮಿಳು ಚಿತ್ರರಂಗದ ನಿರ್ಮಾಪಕರ ಮಂಡಳಿ ನಡೆ ಇದೀಗ ಎಲ್ಲೆಡೆ ಗ್ರಾಸವಾಗಿದೆ. ನಟರಾದ ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಅವರ ಅಸಹಕಾರದ ಆಧಾರದ ಮೇಲೆ ನಿರ್ಮಾಪಕರ ಮಂಡಳಿಯಿಂದ ರೆಡ್ ಕಾರ್ಡ್ ನೀಡಲಾಗಿದೆ ಎಂದು ವರದಿಯಾಗಿದೆ.
ತಮಿಳು ಚಿತ್ರರಂಗದ ಪ್ರಮುಖ ಐವರು ನಟರಿಗೆ ರೆಡ್ ಕಾರ್ಡ್ ನೀಡಿರುವುದು ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ನಟರು ಬೇರೆ ಬೇರೆ ಚಿತ್ರಗಳಿಗೆ ಅಡ್ವಾನ್ಸ್ ಪಡೆದು ಡೇಟ್ಸ್ ಸರಿಯಾಗಿ ನೀಡುತ್ತಿಲ್ಲ ಎಂದು ನಿರ್ಮಾಪಕರ ಪರಿಷತ್ತಿಗೆ ಕೆಲ ಪ್ರೊಡ್ಯೂಸರ್ಗಳು ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ಪರಿಷತ್ತು ನಟರಾದ ವಿಶಾಲ್, ಸಿಂಬು, ಅಥರ್ವ, ಎಸ್.ಜೆ.ಸೂರ್ಯ ಮತ್ತು ಹಾಸ್ಯ ನಟ ಯೋಗಿ ಬಾಬು ಅವರಿಗೆ ರೆಡ್ ಕಾರ್ಡ್ ನೀಡಿದೆ.
ಈ ನಟರು ಸಿನಿಮಾ ಒಪ್ಪಿಕೊಂಡು ನಿರ್ಮಾಪಕರಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಶೂಟಿಂಗ್ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ. ಈಗ ನಟರು ಇದಕ್ಕೆ ಉತ್ತರಿಸಬೇಕಿದೆ. ನಿರ್ಮಾಪಕರ ದೂರಿನ ಬಳಿಕ ಪರಿಷತ್ತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಐವರು ಕಲಾವಿದರು ತಮ್ಮ ವಿರುದ್ಧದ ದೂರಿನ ಬಗ್ಗೆ ಸೂಕ್ತ ವಿವರಣೆ ನೀಡುವುದರೊಂದಿಗೆ ಸಿನಿಮಾಗಳಿಗೆ ಸಹಕಾರ ನೀಡುವುದಾಗಿ ಹೇಳಿದ್ದಲ್ಲಿ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಈ ಹಿಂದಿನಂತೆ ಅಸಹಕಾರ ಮುಂದುವರಿದರೆ ಇವರ ವಿರುದ್ಧ ಪರಿಷತ್ತು ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ




